ಡ್ರೀಂ ಬಾಯ್ಸ್ ವತಿಯಿಂದ
ವರ್ಕಾಡಿಯಲ್ಲಿ ರಂಜಾನ್ ಕಿಟ್ ವಿತರಣೆ
ಮಂಜೇಶ್ವರ: ಇಲ್ಲಿನ ಡ್ರೀಂ ಬಾಯ್ಸ್ ಆಟ್ಸ್ & ಸ್ಪೋಟ್ಸ್ ಕ್ಲಬ್ ಮಜೀರ್ಪಳ್ಳ ಇದರ ವತಿಯಿಂದ 160 ಕುಟುಂಬಗಳಿಗೆ ರಂಜಾನ್ ಕಿಟ್ಟನ್ನು ವಿತರಿಸಲಾಯಿತು.

ಕಾಯ೯ಕ್ರಮದಲ್ಲಿ ದುವಾದೊಂದಿಗೆ ಉದ್ಘಾಟನೆಯನ್ನು ಸೈಯದ್ ಸಂಶುದ್ದೀನ್ ತಂಞಲ್ ನೇರವೆರಿಸಿದರು.
ಅಧ್ಯಕ್ಷತೆಯನ್ನು ಕ್ಲಬ್ಬಿನ ಉಪಾಧ್ಯಕ್ಷ ರಾದ ಹಮೀದ್ ಕಳಿಯುರು ವಹಿಸಿದ್ದರು ಕಾಯ೯ಕ್ರಮದಲ್ಲಿ ಕ್ಲಬ್ಬಿನ ಕಾಯ೯ದಶಿ೯ಗಳಾದ ಸಲಾಂ ಎಬಿ, ಹಮೀದ್ ಎಸ್, ಕೆ, ಅಲ್ತಾಫ್, ಕೋಶಾಧಿಕಾರಿ ಸಲಾಂ ವಿಕೆ, ಮಾಜಿ ಕಾಯ೯ದಶಿ೯ ಸಲಾಂ ವಕಾ೯ಡಿ, ರಜಾಕ್
ಯುನಿವಸ೯ಲ್, ಸತ್ತಾರ್ ಮೊದಲಾದವರು ಉಪಸ್ಥಿತರಿದ್ದರು.
ಯುವ ಜನಾಂಗ ಐಕ್ಯತೆಯಿಂದ ಸಮಾಜಕ್ಕೆ ನೀಡುವ ಇಂತಹ ಸಾಮಾಜೀಕ ಸೇವೆಗಳು ಅಭಿನಂದನೀಯ ಎಂಬದಾಗಿ ಸೈಯದ್ ಸಂಶುದ್ದೀನ್ ತಂಞಲ್ ನುಡಿದರು. ಕಿಟ್ ಗೆ ಸಹಾಯವನ್ನು ನೀಡಿದ ಸವ೯ರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು




