ಕೇರಳ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಮಂಗಳವಾರ ಈದುಲ್ ಫಿತ್ರ್ ಆಚರಣೆ: ಚಂದ್ರ ದರ್ಶನ ಸಮಿತಿ
ಬೆಂಗಳೂರು; ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈದುಲ್ ಫಿತ್ರ್ ಮಂಗಳವಾರ (ಮೇ.3) ಆಚರಣೆ ಮಾಡಲಾಗುವುದು ಎಂದು ಚಂದ್ರ ದರ್ಶನ ಸಮಿತಿ ಪ್ರಕಟಿಸಿದೆ.
ರವಿವಾರ ರಮಝಾನ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ನಡೆದ ಚಂದ್ರ ದರ್ಶನ ಸಮಿತಿಯ ಸಭೆಯಲ್ಲಿ ಮಂಗಳವಾರ ಹಬ್ಬ ಆಚರಣೆ ದಿನ ಘೋಷಿಸಲಾಯಿತು.
ಇನ್ನು ಕೇರಳ ಕರಾವಳಿಯಲ್ಲಿ ಎಲ್ಲೂ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ನಾಳೆ ರಂಝಾನ್ ಉಪವಾಸ ಆಚರಿಸುವಂತೆ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹಾಗೂ ಕಡಲುಂಡಿ ತಂಘಲ್ ಹೇಳಿದ್ದಾರೆ





