February 1, 2026

ಬ್ಯಾಂಕ್ ಖಾತೆಯ ವೆಬ್ ಸೈಟ್ ಲಿಂಕ್ ಕ್ಲಿಕ್: ಖಾತೆಯಲ್ಲಿದ್ದ 55, 620 ರೂ. ಕಳೆದುಕೊಂಡ ಕೊಡಂಗೆ ಆಟೋ ಚಾಲಕ

0
Screenshot_2021-11-01-13-34-38-69_680d03679600f7af0b4c700c6b270fe7.jpg

ಉಪ್ಪಿನಂಗಡಿ: ನಿಮ್ಮ ಉಳಿತಾಯ ಖಾತೆಗೆ ಪಾನ್ ಕಾರ್ಡ್ ನಂಬರ್ ಲಿಂಕ್ ಮಾಡಿ. ಇಲ್ಲವಾದರೆ ಖಾತೆ ಬ್ಲಾಕ್ ಮಾಡಲಾಗುವುದು. ಬ್ಯಾಂಕ್ ಖಾತೆಯ ವೆಬ್ ಸೈಟ್ ಲಿಂಕ್ ನಲ್ಲಿ ಸುಲಭವಾಗಿ ಪಾನ್ ನಂಬರ್ ಅನ್ನು ನೀವಾಗಿಯೇ ಅಪ್ಡೇಟ್ ಮಾಡಬಹುದು ಎನ್ನುವ ಸಂದೇಶವನ್ನು ನಂಬಿ ವಂಚಕರು ಕಳುಹಿಸಿದ ನಕಲಿ ವೆಬ್ ಸೈಟ್ ನಲ್ಲಿ ಖಾತೆಯ ವಿವರ ದಾಖಲಿಸುತ್ತಿದ್ದಂತೆಯೇ ಖಾತೆಯಲ್ಲಿದ್ದ 55, 620 ರೂ . ಹಣ ವಿದ್ ಡ್ರಾ ಆದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಕೊಡಂಗೆ ನಿವಾಸಿ ಆಟೋ ರಿಕ್ಷಾ ಚಾಲಕ ಅಬ್ದುಲ್ ರೆಹಿಮಾನ್ ಹಣ ಕಳೆದುಕೊಂಡು ಮೋಸ ಹೋದವರು. ಅವರ ಮೊಬೈಲ್ ಗೆ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಕಳುಹಿಸಿಲಾಗಿದೆ ಎಂದು ನಂಬಿಸಲಾದ ಸಂದೇಶದಲ್ಲಿ ನಿಮ್ಮ ಉಳಿತಾಯ ಖಾತೆಗೆ ಕೂಡಲೇ ನಂಬರ್ ಅನ್ನು ಜೋಡಿಸಿ. ಇಲ್ಲವಾದರೆ ಖಾತೆಯನ್ನು ಬ್ಲಾಕ್ ಮಾಡಲಾಗುವುದು. ಪಾನ್ ನಂಬರ್ ಅನ್ನು ಜೋಡಿಸಲು ನಮ್ಮ ವೆಬ್ ಸೈಟ್ ನ್ನು ಲಿಂಕ್ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿತ್ತು.

ನೀಡಲಾದ ವೆಬ್ ಸೈಟ್ ನ ಲಿಂಕ್ ನಲ್ಲಿ ಎಸ್ ಬಿ ಐ ಹೆಸರಿದ್ದ ಕಾರಣ ಇದು ಬ್ಯಾಂಕಿನ ವೆಬ್ ಸೈಟ್ ಇರಬಹುದು ಎಂದು ನಂಬಿದ ರೆಹಿಮಾನ್ ಅವರು ಲಿಂಕ್ ಅನ್ನು ಅನ್ನು ತೆರೆದು ಅದರಲ್ಲಿ ಬ್ಯಾಂಕ್ ಖಾತೆ ವಿವರ ದಾಖಲಿಸಿದ್ದರು. ಕೂಡಲೇ ಅದಲ್ಲಿದ್ದ ೫೫, ೬೨೦ ರೂ . ನಗದು ಕಾಣೆಯಾಗಿತ್ತು. ಓಟಿಪಿ ನೀಡಿದರೆ ಮಾತ್ರ ಹಣ ವರ್ಗಾವಣೆ ಗೊಳ್ಳುವುದೆಂದು ಭಾವಿಸಿ ಖಾತೆಯ ವಿವರ ನಿರ್ಭೀತಿಯಿಂದ ವಿವರ ದಾಖಲಿಸುತ್ತಾ ಹೋದ ರೆಹಿಮಾನ್ ಅವರಿಗೆ ತನ್ನ ಖಾತೆಯಿಂದ ಹಣ ಎಗರಿಸಲ್ಪಟ್ಟಿತು ಕಂಗಾಲಾಗಿದ್ದಾರೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!