ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ: ನಾಲ್ವರು ಸ್ಥಳದಲ್ಲೇ ಮೃತ್ಯು
ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಹೊರ ವಲಯದಲ್ಲಿ ಶುಕ್ರವಾರ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಗುಜರಾತ್‌ನ ದೀನೇಶ ಬಾಯ್(35), ಲತೀಶ ಬಾಯ್(36), ಸುರೇಶ ಬಾಯ್(38) ಹಾಗೂ ಕೇರಳದ ಸಹಾಲ್(22) ಎಂದು ಗುರುತಿಸಲಾಗಿದೆ. ಕೇರಳದ ದಾನೇಶ(28), ಜೈನಾಬಿ(25) ಗುಜರಾತನ ಅಶ್ವಿನ್(25) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ





