ಸಾಲ ಮರುಪಾವತಿ ಮಾಡದಿದ್ದಕ್ಕೆ ಅಶ್ಲೀಲ ವೀಡಿಯೊಗೆ ಫೋಟೊ ಎಡಿಟ್: ಏಂಜೆಟ್ ಬಂಧನ
ಮುಂಬೈ: ಸಾಲ ಮರುಪಾವತಿಗೆ ವಿಫಲಳಾಗಿದ್ದಕ್ಕೆ ಸಾಲ ವಸೂಲಾತಿ ಮಾಡುವ ಏಜೆಂಟ್‌ವೊಬ್ಬ ಮಹಿಳೆಯ ಫೋಟೋವನ್ನು ಅಶ್ಲೀಲ ವೀಡಿಯೋದಲ್ಲಿ ಬಳಸಿಕೊಂಡು ಆಕೆಯ ಸಂಬಂಧಿಗೆ ಕಳುಹಿಸಿದ ಘಟನೆ ಮುಂಬೈಯಲ್ಲಿ ನಡೆದಿದೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸಾಲ ಮರುಪಾವತಿ ಮಾಡದಕ್ಕೆ ಸಾಲ ವಸೂಲಾತಿ ಏಜೆಂಟ್ ಆಗಿರುವ 19 ವರ್ಷದ ಯುವಕನೋರ್ವ ಸಾಲ ಪಡೆದ ಮಹಿಳೆಯ ಫೋಟೋವನ್ನು ಬಳಸಿಕೊಂಡು ಅಶ್ಲೀಲ ವೀಡಿಯೋಗೆ ಎಡಿಟ್ ಮಾಡಿದ್ದಾನೆ.
ಅಲ್ಲದೆ, ಈ ವೀಡಿಯೋವನ್ನು ಮಾರ್ಚ್ 4ರಂದು ಆಕೆಯ ಸಂಬಂಧಿಗೆ ಕಳುಹಿಸಿ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸದ್ಯ ಆಕೆ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿದ್ದಾನೆ. ಅಲ್ಲದೆ ಮಹಿಳೆಯ ಫೋನ್ ನಂಬರ್ ಕೂಡಾ ವೀಡಿಯೋದಲ್ಲಿ ನಮೂದಾಗಿತ್ತು.
ಅಪರಿಚಿತ ನಂಬರ್‌ನಿಂದ ಬಂದ ಈ ವೀಡಿಯೋವನ್ನು ನೋಡಿ ಸಂಬಂಧಿ ಆತಂಕಗೊಂಡು ಮಹಿಳೆಯ ಮನೆಗೆ ತೆರಳಿ ವಿಷಯ ತಿಳಿಸಿದ್ದಾರೆ. ಬಳಿಕ ಮುಂಬೈ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ಮತ್ತು ಆಕೆಯ ಸಂಬಂಧಿ ದೂರು ದಾಖಲಿಸಿದ್ದರು.





