ಅರಂತೋಡು: ಬಾಲಕ ಹೊಳೆಯಲ್ಲಿ ಮುಳುಗಿ ಮೃತ್ಯು
ಸುಳ್ಯ: ಅರಂತೋಡು ಕುಕ್ಕುಂಬಳ ಹೊಳೆಗೆ ಸ್ನಾನ ಮಾಡಲು ತೆರಳಿದ ಮಂಗಳೂರಿನ ಬಾಲಕ ಮನ್ವಿತ್ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅರಂತೋಡಿನಿಂದ ವರದಿಯಾಗಿದೆ.
ದಾಮೋದರ ಶೆಟ್ಟಿ ಯವರ ಮಗಳನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಯಿತು. ರಜೆಯ ಸಮಯವಾದರಿಂದ ಕುಕ್ಕುಂಬಳ ಕ್ಕೆ ಬಂದಿದರು ಸಂಜೆ ಹೊತ್ತಲ್ಲಿ ಮನೆ ಮಂದಿಯೊಂದಿಗೆ ಸ್ನಾನ ಮಾಡಲು ತೆರಳಿದರೆಂದು ತಿಳಿದು ಬಂದಿದೆ. ಮೃತದೇಹವನ್ನು ಹೊಳೆಯಿಂದ ತೆಗೆಯಲು ಶರತ್ ಅಡ್ಯಡ್ಕ,ನಿಧೀಶ್ ಅರಂತೋಡು,ತಾಜುದ್ದೀನ್ ಅರಂತೋಡು,ಮುನೀರ್ ಸಂಟ್ಯಾರ್,ಫಯಾಜ್ ಪಟೇಲ್,ಸಂಸುದ್ದೀನ್ ಪೇಲ್ತಡ್ಕ ರವರು ಕಾರ್ಯಾಚರಣೆ ಮಾಡಿ ಮೃತದೇಹ ಮೇಲಕ್ಕೆ ಎತ್ತಲಾಯಿತು.
ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸ್ ಬಂದು ತನಿಖೆ ನಡೆಸುತ್ತಿದ್ದಾರೆ. ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ದಯಾನಂದ ಕುರುಂಜಿ,ವಾರಿಜ ಕುರುಂಜಿ,ಹಂಸ ಕುಕ್ಕುಂಬಳ ,ಸೋಮಶೇಖರ್ ಪೈಕ ಘಟನ ಸ್ಥಳಕ್ಕೆ ಭೇಟಿ ನೀಡಿದರು.




