February 2, 2026

ರ್‍ಯಾಲಿ ವೇಳೆ ದನಕ್ಕೆ ಗುದ್ದಿದ ಬೈಕ್: 18 ವರ್ಷದ ಯುವಕ ಮೃತ್ಯು

0
Screenshot_2022-04-26-04-58-59-19_680d03679600f7af0b4c700c6b270fe7.jpg

ಭೋಪಾಲ್: ಭೀಮ್ ಆರ್ಮಿ ಚೀಫ್ ಚಂದ್ರಶೇಖರ್‍ ಆಝಾದ್ ಬೈಕ್ ರ್‍ಯಾಲಿ ವೇಳೆ ಹಸುವೊಂದಕ್ಕೆ ಗುದ್ದಿದ ಬೈಕ್ ಬಳಿಕ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ18 ವರ್ಷದ ಯುವಕ ಮೃತಪಟ್ಟ ಘಟನೆ ಭೋಪಾಲ್‌ನಲ್ಲಿ ನಡೆದಿದೆ.

ಭೋಪಾಲದ ಸಾಗರದ ರಾತೋಣ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಸೆಮಧಾನ ಗ್ರಾಮದ ಶೈಲೇಂದ್ರ ಅಹಿರ್ವಾರ್‍ ಎಂದು ಗುರುತಿಸಲಾಗಿದೆ.

ಅಹಿರ್ವಾರ್‌ನ ಬೈಕ್‌ ರಸ್ತೆಯಲ್ಲಿ ಸಾಗುತ್ತಿದ್ದ ದನಕ್ಕೆ ಗುದ್ದಿದೆ. ಬಳಿಕ ಇನ್ನೊಂದು ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಬೈಕ್ ಸವಾರ ಕೆಳಗೆ ಬಿದ್ದಿದ್ದು, ತತ್‌ಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ ಎಂದು ಮೋತಿನಗರ ಪೊಲೀಸ್ ಠಾಣಾ ಅಧಿಕಾರಿ ನವಲ್ ಆರ್ಯ ಸೋಮವಾರ ತಿಳಿಸಿದ್ದಾರೆ.

ಘಟನೆಯ ವೀಡಿಯೋ ದಾಖಲಾಗಿದ್ದು, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *

error: Content is protected !!