February 3, 2026

ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ನೀರುಪಾಲು

0
image_editor_output_image-1073512088-1650842465667.jpg

ಅಂಕೋಲಾ: ಗಂಗಾವಳಿ ನದಿಯ ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ಕಾಲು ಜಾರಿ ಬಿದ್ದು ಮೃತ ಪಟ್ಟ ಘಟನೆ ಹಿಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಕಲ್ ಕಡಕಾರ್  ಸಂಭವಿಸಿದೆ.

ಕಡಕಾರ್ ನಿವಾಸಿ ಪೂಜಾ ಮಹೇಶ ನಾಯ್ಕ, ಕುಮಟಾ ಕೋನಳ್ಳಿ ನಿವಾಸಿ ದಿಲೀಪ ನಾಯ್ಕ, ಅಘನಾಶಿನಿ ನಿವಾಸಿ ನಾಗೇಂದ್ರ ನಾಯ್ಕ ಮೃತ ದುರ್ದೈವಿಗಳಾಗಿದ್ದಾರೆ.

ಪೂಜಾ ಪಿ.ಯು.ಸಿ ವಿದ್ಯಾರ್ಥಿನಿಯಾಗಿದ್ದು ಹತ್ತಿರದ ಸಂಬಂಧಿಗಳಾದ ದಿಲೀಪ ಮತ್ತು ನಾಗೇಂದ್ರ ಕುಮಟಾದಿಂದ ರವಿವಾರ ಬೆಳಿಗ್ಗೆ ಉಳಿಯಲು ಬಂದಿದ್ದರು.

ಮೂರು ಮೃತ ದೇಹಗಳು ಪತ್ತೆಯಾಗಿದ್ದು ಅಂಕೋಲಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!