February 3, 2026

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಗಮಿಸುವ ವೇಳೆ ಡ್ರೋನ್ ಹಾರಾಟ: ಆತಂಕಿತರಾದ ಸಿಬ್ಬಂದಿ

0
n380244324165080670660599e7762e33806f54cf0540c009b58afcfb82dc92a5d36c5b44c0d07f90a21d93.jpg

ನೆಲಮಂಗಲ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿದ್ದ ಹೆಲಿಕ್ಯಾಪ್ಟರ್ ನೆಲಮಂಗಲ ಹೆಲಿಪ್ಯಾಡ್‌ಗೆ ಆಗಮಿಸಿದ ವೇಳೆ ಡ್ರೋನ್ ಹಾರಾಟ ಕಂಡು ಬಂದಿದ್ದು ಭದ್ರತಾ ಸಿಬಂದಿ ಆತಂಕಿತರಾದ ಘಟನೆ ಭಾನುವಾರ ನಡೆದಿದೆ.

ಎಚ್.ಡಿ. ದೇವೇಗೌಡರು ನೆಲಮಂಗಲ ತಾಲೂಕಿನ ನಿಡವಂದ ಹೆಲಿಪ್ಯಾಡ್‌ಗೆ ಬಂದಾಗ ಡ್ರೋನ್ ಹಾರಾಟ ಕಂಡು ಬಂದಿತ್ತಲ್ಲದೆ ಡ್ರೋನ್ ತೀರಾ ಸಮೀಪಕ್ಕೆ ಬಂದಿತ್ತು. ಇದರಿಂದ ಡ್ರೋನ್ ಹಾರಾಟ ನಿಲ್ಲುವವರೆಗೂ ದೇವೇಗೌಡ ಅವರು ಹೆಲಿಕಾಪ್ಟರ್‌ನಿಂದ ಕೆಳಗಿಳಿಯಲಿಲ್ಲ. ಭದ್ರತಾ ವೈಫಲ್ಯದಿಂದಾಗಿ ಸಿಬಂದಿಗಳು ಆತಂಕಿತರಾದರು. ಅಲ್ಲದೆ, ಹೆಲಿಕಾಪ್ಟರ್ ಹಾರಾಟ ನಡೆಸಿದ ಸಮಯದಲ್ಲೇ ಡ್ರೋನ್ ಹಾರಾಟ ಮಾಡಿದ್ದಕ್ಕೆ ಭದ್ರತಾ ಸಿಬಂದಿಗಳು ವ್ಯಕ್ತಿಯ ವಿರುದ್ದ ಆಕ್ರೋಶಿತರಾದರು.

ಬಳಿಕ ಡ್ರೋನ್ ಹಾರಾಟವನ್ನು ನಿಲ್ಲಿಸುವಂತೆ ಆತನಿಗೆ ಸೂಚಿಸಿದರು. ಭದ್ರತಾ ಸಿಬಂದಿ ಸೂಚನೆ ಬಳಿಕ ಆತ ಡ್ರೋನ್‌ ಹಾರಾಟವನ್ನು ನಿಲುಗಡೆಗೊಳಿಸಿದ ಎಂದು ವರದಿಯಾಗಿದೆ. ಭಾರತಿಪುರ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಚ್.ಡಿ. ದೇವೇಗೌಡರು ಆಗಮಿಸಿದ ವೇಳೆ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!