February 2, 2026

ಪಿಎಸ್ಐ ನೇಮಕ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡ!

0
image_editor_output_image-135180436-1650792467441.jpg

ಹಾವೇರಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ PSI Recruitment) ನೇಮಕಾತಿ ವೇಳೆ ನಡೆದಿರುವ ಅಗಾಧ ಅಕ್ರಮದಲ್ಲಿ ಸದ್ಯಕ್ಕೆ ಕಿಂಗ್ ಪಿನ್ ಎನ್ನಲಾಗಿರುವ ರುದ್ರಗೌಡ ಪಾಟೀಲ್ ಬಂಧನವಾಗುತ್ತಿದ್ದಂತೆ ಅನೇಕರಿಗೆ ನಡುಕ ಶುರುವಾಗಿದೆ.

ಥರಹೇವಾರಿ, ರಂಗುರಂಗಿನ ಬೆಳವಣಿಗೆಗಳೂ, ಅಕ್ರಮಗಳು ಕಣ್ಣಿಗೆ ರಾಚುತ್ತಿವೆ. ಈ ಮಧ್ಯೆ, ಪರಮ ಶಿಸ್ತಿನ ಪೊಲೀಸ್ ಇಲಾಖೆಗೆ ಸೇರುವ ಮುನ್ನ ವಸ್ತ್ರ ಸಂಹಿತೆಯನ್ನು ಕಡೆಗಣಿಸಿ, ಇನ್ನೂ ನೇಮಕಾತಿಯೇ ಆಖೈರು ಆಗದಿದ್ದರೂ ಆಯ್ಕೆಗೊಂಡಿರುವ ಅಭ್ಯರ್ಥಿಯೊಬ್ಬರು ತಮ್ಮೂರಿನ ಜನತೆಯ ಮುಂದೆ ಪಿಎಸ್ಐ ಸಮವಸ್ತ್ರ ಧರಿಸಿ, ಭಾಷಣ ಮಾಡಿರುವ ಪ್ರಸಂಗ ನಡೆದಿದೆ. ಇದು ಸ್ವಲ್ಪಅತಿರೇಕದ್ದೇ ಅನಿಸಿದ್ದರೂ, ಸದರಿ ಅಭ್ಯರ್ಥಿ ನಿಜಕ್ಕೂ ಪ್ರಾಮಾಣಿಕವಾಗಿ 27ನೇ ರ್ಯಾಂಕ್ ಗಳಿಸಿ, ಆಯ್ಕೆಯಾಗಿದ್ದರೆ ಅತ್ಯುತ್ಸಾಹದಲ್ಲಿ ಡ್ರೆಸ್ ಹಾಕಿಕೊಂಡು, ಸ್ವಲ್ಪ ಯಡವಟ್ಟು ಮಾಡಿಕೊಂಡಿದ್ದಾರೆ ಎನ್ನಬಹುದು.

ಹೌದು ಪಿಎಸ್ಐ ಆಗಿ ಆಯ್ಕೆಯಾಗಿರುವ (PSI Recruitment) ಬಸನಗೌಡ ಕರೇಗೌಡ ಅವರು 27ನೇ ರ್ಯಾಂಕ್ ಪಡೆದಿದ್ದಾರೆ. ಇವರು ಮೂಲತಃ ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದ ನಿವಾಸಿ. ಸದ್ಯಕ್ಕೆ ಕಾನ್ಸ್ಟೇಬಲ್ ಆಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ, ಪಿಎಸ್ಐ ಪರೀಕ್ಷೆ ಬರೆದು, ಅತ್ಯುತ್ತಮ ಎನ್ನಬಹುದಾದ 27ನೇ ರ್ಯಾಂಕ್ ಪಡೆದು, ಆಯ್ಕೆಯೂ ಆಗಿದ್ದಾರೆ. ಆದರೆ ವಿಷಯ ಅದಲ್ಲ; ಪಿಎಸ್ಐ ಸೆಲೆಕ್ಷನ್ ಆಗಿದ್ದಕ್ಕೆ ಇವರು ತಮ್ಮ ಹುಟ್ಟೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್ಐ ಡ್ರೆಸ್ ಹಾಕ್ಕೊಂಡು ಮಿಂಚಿದ್ದಾರೆ! ಹೀಗೆ ಬಿಲ್ಡ್ ಅಪ್ ಕೊಟ್ಟ ಬಸನಗೌಡ ಕರೇಗೌಡ ಅವರು ಜನವರಿ 19, 2022ರಂದು ಬಿಡುಗಡೆಯಾಗಿದ್ದ ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ಶ್ರೇಣಿ ಪಡೆದಿದ್ದಾರೆ.

ಒಟ್ಟು 545 ಪಿಎಸ್ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿಯಲ್ಲಿ ಬಸನಗೌಡ ಸಹ ಸೆಲೆಕ್ಟ್ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!