ಮಳಲಿ ಮಸೀದಿ ಅವಾಂತರ- ವಾಸ್ತು ಶಿಲ್ಪ ನೋಡಿ ಜಾತಿ ಹುಡುಕುವ ಸಂಪ್ರದಾಯ ನಿಲ್ಲಲಿ: ಮುಸ್ಲಿಮ್ ಒಕ್ಕೂಟ
ಮಂಗಳೂರು: ಗುರುಪುರ ಹೋಬ್ಲಿ, ತೆಂಕ ಉಳೆಪ್ಪಾಡಿ ಗ್ರಾಮದ ಮಳಲಿಯ ಶೃದ್ದಾ ಕೇಂದ್ರದ ನವೀಕರಣ ಸಂದರ್ಭ ರಚನೆಯ ವಾಸ್ತು ಶಿಲ್ಪ ನೋಡಿ, ಅದು ಪ್ರಾಚೀನ ಅನ್ಯ ಕೋಮಿನ ಶೃದ್ಧಾ ಕೇಂದ್ರವೆಂದು ರದ್ದಾಂತ ಎಬ್ಬಿಸುವ ಮತೀಯ ಮನಸ್ಥಿತಿ ಇನ್ನಾದರೂ ಈ ದೇಶದಲ್ಲಿ ನಿಲ್ಲಬೇಕು.
ಪುರಾತನ ಮಸೀದಿಗಳ ಹೆಚ್ಚಿನ ವಾಸ್ತು ಶಿಲ್ಪಗಳನ್ನು ಸ್ಥಳೀಯ ಶೈಲಿಯಲ್ಲಿ ಇಲ್ಲಿನ ಮುಸ್ಲಿಮೇತರ ಕೆತ್ತನೆ ಶಿಲ್ಪಿಗಳ ಕಾರ್ಯದಿಂದಲೆ ರಚಿಸಲಾಗಿದೆ.
ಈ ದೇಶದ ಪ್ರಾಚೀನ ಅದೆಷ್ಟೋ ಮಸೀದಿಗಳ ನಿರ್ಮಾಣದಲ್ಲಿ ಈ ನಾಡಿನ ಮುಸ್ಲಿಮೇತರ ಮಾನವ ಶ್ರಮ ಕೊಡುಗೆ ಇದೆ.
ಹಾಗೆಂದು ವರ್ತಮಾನದ ಸೀಮಿತ ಮನಸ್ಥಿತಿಯ ಸಂಸ್ಕೃತಿ ಧರ್ಮ ರಕ್ಷಕರು ಎಂದು ಕರೆಸಿಕೊಳ್ಳುವ ಕೆಲವು ಪುಂಡರ ರದ್ದಾಂತವೆ ಹೊರತು, ಮಳಲಿ ಘಟನೆ ಬೇರೇನು ಅಲ್ಲ. ಇವರಿಗೆ ಕರೆಸಿ ಬುದ್ದಿ ಹೇಳುವವರಿಲ್ಲ. ಇಂತಹ ರದ್ದಾಂತಿಗಳು,
ಇತ್ತೀಚೆಗೆ ಮಂಗಳೂರಿನ ಪಕ್ಷಿಕೆರೆಯಲ್ಲಿ ನಿರ್ಮಾಣವಾದ ನವ ಮಸೀದಿ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಒಳಾಂಗಣ ಸ್ಥಳೀಯ ಹರೀಶ್ ಆಚಾರ್ಯ ಶಿಲ್ಪಿಯ ಇಂಡೋ ಅರೇಬಿಯನ್ ವಾಸ್ತು ಶಿಲ್ಪದ ಮರದ ಕೆತ್ತನೆಯನ್ನು, ಮಸೀದಿಗೆ ಮುಕ್ತ ಭೇಟಿ ಮಾಡಿ,
ವೀಕ್ಷಿಸಲಿ ಮತ್ತು ಹರೀಶ್ ಆಚಾರ್ಯರಿಂದ ಪಾಠ ಕಲಿತುಕೊಳ್ಳಲಿ ಎಂದು ಮುಸ್ಲಿಮ್ ಒಕ್ಕೂಟದ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.