February 2, 2026

20 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಮಹಿಳಾ ಟ್ರಾಫಿಕ್ ಇನ್ ಸ್ಪೆಕ್ಟರ್

0
image_editor_output_image-2027208855-1650583796191.jpg

ಬೆಂಗಳೂರು: ನೆಲದಡಿಯಲ್ಲಿ ಅನಿಲ ಕೊಳವೆ ಅಳವಡಿಸುವ ಗುತ್ತಿಗೆ ಕಾಮಗಾರಿ ಮುಂದುವರಿಸಲು ಗುತ್ತಿಗೆದಾರರೊಬ್ಬರಿಂದ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಚಿಕ್ಕಜಾಲ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆಯ ಹಂಸವೇಣಿ ಬಂಧಿತರು. ರಾಮಪುರ ನಿವಾಸಿಯೊಬ್ಬರು ಗ್ಯಾಸ್‌ಲೇನ್‌ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಾಗಿದ್ದು, ಗೇಲ್‌ ಕಂಪನಿ ವತಿಯಿಂದ ಮಾಸ್‌ ಕನ್‌ಸ್ಟ್ರಕ್ಷನ್‌ನವರಿಗೆ ಬೆಂಗಳೂರು ನಗರದ ಸಾಕಷ್ಟು ಕಡೆ ನೆಲದ ಅಡಿಯಲ್ಲಿ ಪೈಪ್‌ ಅಳವಡಿಸಿ ಗ್ಯಾಸ್‌ ಸಂಪರ್ಕ ನೀಡುವ ಗುತ್ತಿಗೆಯನ್ನು ಇವರು ಪಡೆದಿದ್ದರು.

ಅದೇ ರೀತಿ ಜಕ್ಕೂರು ವಾರ್ಡ ನಂ-5ರ ಟೆಲಿಕಾಂ ಬಡಾವಣೆಯಲ್ಲಿ ನೆಲದಡಿಯಲ್ಲಿ ಪೈಪ್‌ ಅಳವಡಿಸುವ ಉಪಗುತ್ತಿಗೆ ನೀಡಲಾಗಿತ್ತು. ಟೆಲಿಕಾಂ ಬಡಾವಣೆಯ 8ನೇ ಕ್ರಾಸ್‌ನಲ್ಲಿ ಕಾಮಗಾರಿ ಪ್ರಾರಂಭಿಸಿದಾಗ ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಹಂಸವೇಣಿ ಕೆಲಸ ನಿಲ್ಲಿಸಲು ಸೂಚಿಸಿದ್ದರು. ಕಾಮಗಾರಿಯ ದಾಖಲಾತಿಗಳನ್ನು ಠಾಣೆಗೆ ತೆಗೆದುಕೊಂಡು ಬರುವಂತೆ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!