ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮೀ ಎಸ್. ಆರ್ ವರ್ಗಾವಣೆ
ಬಂಟ್ವಾಳ: ತಾಲೂಕು ತಹಶೀಲ್ದಾರರಾಗಿದ್ದ ರಶ್ಮೀ ಎಸ್. ಆರ್ ರವರನ್ನು ಕಂದಾಯ ಇಲಾಖೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಅಕ್ಕಮಹಾದೇವಿ ಯವರು ಆದೇಶ ಹೊರಡಿಸಿದ್ದು, ಬಂಟ್ವಾಳ ದ ಗ್ರೇಡ್ 1 ತಹಶೀಲ್ದಾರರಾಗಿದ್ದ ರಶ್ಮಿ ಎಸ್. ಆರ್ ಅವರನ್ನು ಮುಂದಿನ ಆದೇಶದ ವರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ್ಯಾಗಿ ನಿಯೋಜಿಸಿ ಆದೇಶಿಸಿದ್ದಾರೆ.




