ಪಾಲಕ್ಕಾಡ್: ಎಸ್ಡಿಪಿಐ ಕಾರ್ಯಕರ್ತನ ಮಾರಕಾಯುಧದಿಂದ ದಾಳಿ ನಡೆಸಿ ಹತ್ಯೆ
ಪಾಲಕ್ಕಾಡ್: ಶುಕ್ರವಾರದ ನಮಾಝ್ ನಿರ್ವಹಿಸಿ ಮನೆಗೆ ಹಿಂದಿರುತ್ತಿದ್ದ ಎಸ್ ಡಿಪಿಐ ಕಾರ್ಯಕರ್ತ ಝುಬೈರ್ ಪಾರ (44) ಅವರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಮಾರಕಾಯುಧದಿಂದ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ಕೇರಳದ ಪಾಲಕ್ಕಾಡ್ ಬಳಿ ನಡೆದಿದೆ.
ಪಾಲಕ್ಕಾಡ್ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇಂದು ಮಧ್ಯಾಹ್ನ 1.30ರ ಸುಮಾರಿಗೆ ಶುಕ್ರವಾರದ ನಮಾಝ್ ನಿರ್ವಹಿಸಿ ಮನೆಗೆ ಹಿಂದಿರುತ್ತಿದ್ದಾಗ ಮಾರ್ಗ ಮಧ್ಯೆ ಎಲಪ್ಪುಳ್ಳಿ ಮಸೀದಿ ಸಮೀಪ ಎರಡು ಕಾರುಗಳಲ್ಲಿ ಬಂದ ಆರ್ ಎಸ್ ಎಸ್ ಕಾರ್ಯಕರ್ತರ ತಂಡ, ಝುಬೈರ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಝುಬೈರ್ ರಸ್ತೆಗೆ ಬಿದ್ದಾಗ ಅವರ ಮೇಲೆ ಮಾರಕಾಯುಧಗಳಿಂದ ಆರ್ ಎಸ್ ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಾಲಕ್ಕಾಡ್ ಜಿಲ್ಲಾ ಅಧ್ಯಕ್ಷರಾಗಿ, ಎಸ್ ಡಿಪಿಐ ಎಲಪ್ಪುಳ್ಳಿ ಪಂಚಾಯತ್ ಸಮಿತಿ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.




