ನ.1ರಂದು ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳುತ್ತಿರುವ ಯೋಧ ದಯಾನಂದ ಅವರಿಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ

ವಿಟ್ಲ: ಯುದ್ಧ ಭೂಮಿಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳುತ್ತಿರುವ ವಿಟ್ಲದ ನೆತ್ರಕೆರೆ ನಿವಾಸಿ ಸಿ ಆರ್ ಪಿ ಎಫ್ ಯೋಧ ದಯಾನಂದ ಅವರಿಗೆ ವಿಟ್ಲ ಸಿಟಿ ಲಯನ್ಸ್ ಕ್ಲಬ್ ಮತ್ತು ಸೈಂಟ್ ರೀಟಾ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಅದ್ದೂರಿ ಸ್ವಾಗತ ಕಾರ್ಯಕ್ರಮ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಸೋಮವಾರ ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ಸ್ವಾಗತ ಬಳಿಕ ಸೈಂಟ್ ರೀಟಾ ಶಾಲೆಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಲಿದ್ದಾರೆ.
2001ರಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಮೇಜರ್ ದಯಾನಂದ ಅವರು ಒಟ್ಟು 20 ವರ್ಷಗಳ ಕಾಲ ದೇಶ ಸೇವೆಗೈದಿದ್ದಾರೆ. ಇದರ ನಡುವೆ 10 ವರ್ಷ ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದು, ಬಳಿಕ ಅಸ್ಸಾಂ ಮತ್ತು ನಾಗಲ್ಯಾಂಡ್ ಗಡಿಗಳಲ್ಲಿ ದೇಶ ಸೇವೆ ಸಲ್ಲಿಸಿದ್ದಾರೆ. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಭಾರತೀಯ ಅರೆಸೇನಾ ಪಡೆಯಲ್ಲಿ ಕರ್ತವ್ಯ ಸಲ್ಲಿಸಿದ್ದರು.
ಇದೀಗ ನಿವೃತ್ತ ಹೊಂದಿದ್ದ ಇವರು ತಾಯ್ನಾಡಿಗೆ ಮರಳುತ್ತಿದ್ದು, ಅದ್ದೂರಿ ಸ್ವಾಗತ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ, ಯಶಸ್ವಿಗೊಳಿಸಬೇಕಾಗಿ ಎಂದ ಸಂಘಟಕರು ವಿನಂತಿದ್ದಾರೆ.
