ಉಳ್ಳಾಲ: ಮಸೀದಿ ಬಳಿ ಯುವಕನಿಗೆ ಚೂರಿ ಇರಿತ
ಉಳ್ಳಾಲ: ಕ್ಷುಲ್ಲಕ ವಿಚಾರವಾಗಿ ತಂಡವೊಂದು ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಸಮೀಪದ ಮುಕ್ಕಚೇರಿ ಬಳಿಯ ಮಸೀದಿ ಪಕ್ಕ ನಡೆದಿದೆ.
ಕೋಡಿ ನಿವಾಸಿ ಮೊಯೀನ್ ಎಂಬವರ ಪುತ್ರ ಅಲ್ ಸದೀನ್ (24) ಚೂರಿ ಇರಿತಕ್ಕೆ ಒಳಗಾದ ಯುವಕ.
ಅಲ್ ಸದೀನ್ ಮಸೀದಿ ಸಮೀಪ ನಿಂತಿದ್ದ ಸಂದರ್ಭ ತಂಡವೊಂದು ಆಗಮಿಸಿ ಕ
ಚೂರಿಯಿಂದ ದಾಳಿ ಮಾಡಿದೆ ಎನ್ನಲಾಗಿದೆ. ಯುವಕನ ಬೆನ್ನಿನ ಮೇಲೆ ಚೂರಿ ಇರಿತದ ಗಾಯಗಳು ಕಂಡು ಬಂದಿದೆ.
ಇವರು ನಾಲ್ಕು ಜನ ಮಸೀದಿಯ ಸಮೀಪ ಮಾತನಾಡುತ್ತಿದ್ದ ವೇಳೆ ಯುವತಿಯ ವಿಚಾರ ಬಂದಿದ್ದು ಇದು ಗಲಾಟೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇಬ್ಬರ ನಡುವೆ ವಾಗ್ವಾದ ನಡೆದು, ಅವರ ಪೈಕಿ ಓರ್ವ ಆರೋಪಿ ತನ್ನ ಬಳಿಯಿದ ಚೂರಿಯಿಂದ ಅಲ್ ಸದೀನ್ ಗೆ ಇರಿದಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿ ನೀಡಲಾಗುತ್ತಿದೆ. ಅಲ್ಲಿಗೆ ಪೊಲೀಸ್ ಕಮೀಷನರ್ ಶಶಿ ಕುಮಾರ್, ಎಸಿಪಿ ದಿನಕರ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.




