August 20, 2026

ವಿಟ್ಲ: ಮರಕ್ಕೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

0
image_editor_output_image965536991-1649755922238.jpg

ವಿಟ್ಲ: ಕಾಶಿಮಠ ಕೊಪ್ಪಳದಲ್ಲಿ ಮನೆ ಹಿಂಭಾಗದ ಮರಕ್ಕೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಶಿಮಠ ಕೊಪ್ಪಳ ನಿವಾಸಿ ಸಂಜೀವ ಶೆಟ್ಟಿ (65) ಮೃತರಾಗಿದ್ದಾರೆ. ರಾತ್ರಿ ಎಂದಿನಂತೆ ಮನೆಯಲ್ಲಿ ಮಲಗಿದ್ದವರು ಬೆಳಗ್ಗೆ ಮನೆಯ ಹೊರಗಿನ ಮರಕ್ಕೆ ನೇಣುಬಿಗಿದುಕೊಂಡಿದ್ದರು. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೇಪು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾಲ್ಕು ಜನ ನಾಲ್ಪೋಳುಗಳ ಪೈಕಿ ಇವರು ಓರ್ವರಾಗಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!