August 20, 2026

ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಐವರು ಉದ್ಯೋಗಿಗಳಿಗೆ BMW ಕಾರು ಉಡುಗೊರೆ ನೀಡಿ ಅಚ್ಚರಿಗೊಳಿಸಿದ ಕಂಪನಿ ಸಿಇಒ

0
bmw.jpg

ಚೆನ್ನೈ: ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ತಮ್ಮ ಕೈಬಿಡದೆ ಜೊತೆಗಿದ್ದು ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಐವರು ಸೀನಿಯರ್ ಉದ್ಯೋಗಿಗಳಿಗೆ ಚೆನ್ನೈ ಮೂಲದ ಕಿಸ್ ಫ್ಲೋ ಎನ್ನುವ ಐಟಿ ಕಂಪನಿ, ಸಿಇಒ BMW ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅನೇಕ ಸೀನಿಯರ್ ಉದ್ಯೋಗಿಗಳು ಕಂಪನಿ ಬೆಳೆಯುವುದಿಲ್ಲವೆಂದು ಅರ್ಧಕ್ಕೆ ಕೆಲಸ ಬಿಟ್ಟು ಬೇರೆ ಕಂಪನಿ ಸೇರಿಕೊಂಡಿದ್ದರು. ಅದರಲ್ಲೂ ಕೊರೊನಾ ಸಮಯದಲ್ಲಿ ಅನೇಕ ಮಂದಿ ಸಂಸ್ಥೆ ತೊರೆದಿದ್ದರು. ಆದರೆ ಐವರು ಮಂದಿ ಎಂಥ ಸಮಸ್ಯೆ ಎದುರಾದಾಗಲೂ ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ ಎಂದು ಸಿಇಒ ಹೇಳಿದ್ದಾರೆ.

BMW ಕಾರಿನ ಬೆಲೆ 1 ಕೋಟಿ ರೂ. ಕಾರು ಉಡುಗೊರೆಯಾಗಿ ನೀಡುವ ವಿಚಾರವನ್ನು ಗೌಪ್ಯವಾಗಿರಿಸಲಾಗಿತ್ತು. ಉಡುಗೊರೆ ನೀಡುವುದಕ್ಕೆ ಕೆಲವೇ ಗಂಟೆ ಮೊದಲು ಉದ್ಯೋಗಿಗಳಿಗೆ ತಿಳಿಸಲಾಗಿತ್ತು. ಕಾರು ನೀಡುವ ಸಂದರ್ಭ ಉದ್ಯೋಗಿಗಳ ಕುಟುಂಬಸ್ಥರೂ ಜೊತೆಗಿದ್ದಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!