August 20, 2026

ಹಿಂದಿಯನ್ನು ಇಂಗ್ಲಿಷ್‍ಗೆ ಪರ್ಯಾಯವಾಗಿ ಸ್ವೀಕರಿಸುವುದು ಭಾರತದ ಏಕತೆಗೆ ಮತ್ತು ವೈವಿಧ್ಯತೆ ಧಕ್ಕೆ: ಎಂ.ಕೆ ಸ್ಟಾಲಿನ್

0
images-7.jpeg

ಚೆನ್ನೈ: ಹಿಂದಿಯನ್ನು ಇಂಗ್ಲಿಷ್‍ಗೆ ಪರ್ಯಾಯವಾಗಿ ಸ್ವೀಕರಿಸುವುದು ಭಾರತದ ಏಕತೆಗೆ ಮತ್ತು ವೈವಿಧ್ಯತೆ ಧಕ್ಕೆಯನ್ನು ತರುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶನಿವಾರ ಟೀಕಿಸಿದ್ದಾರೆ.

ಹಿಂದಿಯನ್ನು ಇಂಗ್ಲಿಷ್‍ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಮತ್ತು ಸ್ಥಳೀಯ ಭಾಷೆಗಳಿಗೆ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ ತಮಿಳುನಾಡು ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವರು ಇಂಗ್ಲಿಷ್ ಬದಲಿಗೆ ಹಿಂದಿ ಮಾತನಾಡುವ ರಾಜ್ಯಗಳು ಸಾಕು ಎಂದು ಭಾವಿಸುತ್ತಾರೆ. ಆದರೆ ಏಕ ಭಾಷೆಯು ಏಕತೆಗೆ ಸಹಾಯ ಮಾಡುವುದಿಲ್ಲ. ಬಿಜೆಪಿ ನಾಯಕತ್ವವು ಭಾರತದ ವೈವಿಧ್ಯತೆಯನ್ನು ಹಾಳು ಮಾಡುವ ಕೆಲಸವನ್ನು ಮುಂದುವರಿಸಿದೆ ಎಂದಿದ್ದಾರೆ.

ಭಾರತೀಯ ರಾಜ್ಯ ಸಾಕು, ಆದರೆ ಭಾರತದ ರಾಜ್ಯಗಳು ಬೇಕಾಗಿಲ್ಲ ಎಂದು ಅಮಿತ್ ಶಾ ಅವರು ಹೇಳಿದ್ದಾರೆ. ಆದರೆ ಏಕ ಭಾಷೆ ಏಕತೆಗೆ ಸಹಾಯ ಮಾಡುವುದಿಲ್ಲ ಹಾಗೂ ಏಕತೆಯನ್ನು ಸೃಷ್ಟಿಸುವುದಿಲ್ಲ. ನೀವು ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತೀರಿ. ಆದರೆ ನೀವು ಅದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!