March 19, 2026

ಭಟ್ಕಳ: ಸಾರ್ವಜನಿಕರ ಮೇಲೆ ಮೊಟ್ಟೆ, ಕಲ್ಲು ತೂರಾಟ: ಓರ್ವ ಪೊಲೀಸ್ ವಶಕ್ಕೆ

0
image_editor_output_image432552865-1649459984933.jpg

ಭಟ್ಕಳ: ಭಟ್ಕಳದಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳು ವಿನಾಕಾರಣ ಕೆಲವು ಕಡೆ ಸಾರ್ವಜನಿಕರ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಸಾರ್ವಜನಿಕರು ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೆಬಳೆ ಗ್ರಾಮ ಪಂಚಾಯಿತಿಯ ಗಾಂಧಿನಗರ, ಹೆಬಳೆಯಲ್ಲಿ ಮೊಟ್ಟೆ ಎಸೆದ ಕಿಡಿಗೇಡಿಗಳು ಹನುಮಾನ್ ನಗರದಲ್ಲಿ ಆಟೊರಿಕ್ಷಾ ಚಾಲಕ ಕೃಷ್ಣ ಮಾಸ್ತಪ್ಪ ನಾಯ್ಕ ಎಂಬುವವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ.

ಪುರವರ್ಗ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ಮೊಟ್ಟೆ ಎಸೆದಿದ್ದಾರೆ. ಆಗ  ಅವನ ಸಹೋದರ ಕಿಡಿಗೇಡಿಗಳನ್ನು ಬೆನ್ನಟ್ಟಿ ಬಂದು ಪಟ್ಟಣದ ರಾಘವೇಂದ್ರ ಮಠದ ಬಳಿ ಒಬ್ಬನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ. 

ರಾಘವೇಂದ್ರ ಮಠದ ಹತ್ತಿರ ಒಬ್ಬ ಕಿಡಿಗೇಡಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುವ ಸಮಯದಲ್ಲೇ ಮತ್ತೆ ಕೆಲವರು, ಅವನು ಬಳಸಿದ್ದ ಬೈಕ್‌ನ ಎರಡೂ ನಂಬರ್ ಪ್ಲೇಟ್‌ಗಳನ್ನು ಕಳಚಿ ಪರಾರಿಯಾಗಿದ್ದಾರೆ. ಬೈಕನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಬಂದಿದ್ದಾರೆ. 

ವಿಷಯ ತಿಳಿಯುತ್ತಿದ್ದಂತಯೇ ನೂರಾರು ಜನರು ಶಹರ ಪೊಲೀಸ್ ಠಾಣೆ ಎದುರು ಜಮಾಯಿಸಿದರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಲಾಠಿ ಬೀಸಿ ಗುಂಪನ್ನು ಚದುರಿಸಿದರು.

ಭಟ್ಕಳದಲ್ಲಿ ಭಾನುವಾರ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ‌ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!