February 3, 2026

ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುವ ಅಡುಗೆಯವರ ಮಾಸಿಕ ಗೌರವ ಸಂಭಾವನೆಯಲ್ಲಿ ಹೆಚ್ಚಳ

0
Screenshot_2022-04-08-04-23-28-61_680d03679600f7af0b4c700c6b270fe7.jpg

ಬೆಂಗಳೂರು: ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುವ ಮುಖ್ಯ ಅಡುಗೆಯವರು, ಸಹಾಯಕ ಅಡುಗೆಯವರಿಗೆ ಮಾಸಿಕ ಗೌರವ ಸಂಭಾವನೆಯನ್ನು ಪ್ರಸಕ್ತ ಸಾಲಿನಿಂದ (2022–23) ತಲಾ ₹ 1,000 ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

2018ರ ಜ.1 ರಿಂದ ಅನ್ವಯವಾಗುವಂತೆ ₹ 500 ಹೆಚ್ಚಿಸಿ, ಮುಖ್ಯ ಅಡುಗೆಯವರಿಗೆ ತಿಂಗಳಿಗೆ ₹ 2,700, ಸಹಾಯಕ ಅಡುಗೆಯವರಿಗೆ ₹ 2,600 ಗೌರವ ಸಂಭಾವನೆ ನೀಡಲಾಗುತ್ತಿದೆ. ‌ಪರಿಷ್ಕೃತ ಆದೇಶದಿಂದ ಮುಖ್ಯ ಅಡುಗೆಯವರ ಸಂಭಾವನೆ
₹ 3,700, ಸಹಾಯಕ ಅಡುಗೆಯವರ ಸಂಭಾವನೆ ₹ 3,600ಕ್ಕೆ ಏರಿಕೆ ಆಗಲಿದೆ.

ಯೋಜನೆಯಲ್ಲಿ 47,250 ಮುಖ್ಯ ಅಡುಗೆಯವರು, 71,336 ಸಹಾಯಕ ಅಡುಗೆಯವರಿದ್ದು, ಒಟ್ಟು 1,18,586 ಸಿಬ್ಬಂದಿಗೆ ಗೌರವ ಸಂಭಾವನೆಯನ್ನು ₹ 1,000ದಂತೆ ಹೆಚ್ಚಿಸುವುದರಿಂದ ₹ 118.58 ಕೋಟಿ ಅನುದಾನ ಹೆಚ್ಚುವರಿಯಾಗಿ ಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!