March 19, 2026

ಉಡುಪಿ: ಸಿಟಿ ಬಸ್ ನಿಲ್ದಾಣದಲ್ಲಿ ನಿರ್ವಾಹಕರ ಫೈಟಿಂಗ್: ವಿಡಿಯೋ ವೈರಲ್ !

0
image_editor_output_image740267209-1649219122924.jpg

ಉಡುಪಿ: ಟೈಮಿಂಗ್ ವಿಷಯದಲ್ಲಿ ಪ್ರತಿನಿತ್ಯ ಜಗಳ ಮಾಡುವ ಖಾಸಗಿ ಬಸ್ ನಿರ್ವಾಹಕರು ಒಂದು ಹೆಜ್ಜೆ ಮುಂದೆ ಹೋಗಿ ನಡುರಸ್ತೆಯಲ್ಲೇ ಫೈಟಿಂಗ್ ಮಾಡಿಕೊಂಡ ದೃಶ್ಯವೊಂದು ಭಾರೀ ವೈರಲ್ ಆಗುತ್ತಿದೆ.

ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ನಿರ್ವಾಹಕರಿಬ್ಬರು ಪೈಲ್ವಾನರಂತೆ ಬೀದಿ ಕಾಳಗ ನಡೆಸಿದ್ದಾರೆ. ಟೈಮಿಂಗ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಇವರಿಬ್ಬರು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ.

ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್‌ಗಳ ಕಂಡಕ್ಟರ್‌ಗಳು ಟೈಮಿಂಗ್ ವಿಚಾರದಲ್ಲಿ ಸಿಟಿ ಬಸ್ ನಿಲ್ದಾಣದಲ್ಲಿ ಹೊಡೆದಾಡಿಕೊಂಡಿದ್ದಾರೆ. ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಇದು ಮನರಂಜನೆ ಉಂಟು ಮಾಡಿದೆ.

Leave a Reply

Your email address will not be published. Required fields are marked *

error: Content is protected !!