ಕುಂಬಾರಗೇರಿಯಲ್ಲಿ ಭಾರೀ ಮಳೆ ಗಾಳಿಗೆ ಮನೆಯ ಮೇಲ್ಛಾವಣಿ ಕುಸಿತ: ಮಹಿಳೆ ಮೃತ್ಯು
ಹಾವೇರಿ : ತಾಲೂಕಿನ ಗುತ್ತಲ ಪಟ್ಟಣದ ಕುಂಬಾರಗೇರಿಯಲ್ಲಿ ಬಾರೀ ಮಳೆ ಗಾಳಿಗೆ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬಳು ಮೃತಪಟ್ಟ ದುರ್ಘಟನೆ ಮಂಗಳವಾರ ಸಂಜೆ ನಡೆದಿದೆ.
ಮೃತ ಮಹಿಳೆ ಪಟ್ಟಣದ ಮುಮ್ತಾಜ್ ಸಿರಾಜ್ ಬಾಲೆಬಾಯಿ (42) ಎಂದು ತಿಳಿದು ಬಂದಿದೆ. ಮಳೆ ಗಾಳಿಯಿಂದಾಗಿ ಪಟ್ಟಣದ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು, ಮರಗಳು ಧರೆಗುಳಿದಿದೆ.
ನೆಲಕಚ್ಚಿವೆ. ಮನೆಯೊಳಗಿನ ಜನರು ಬಾರೀ ಅನಾಹುತದಿಂದ ಪಾರಾದ ಘಟನೆ ಸಂಭವಿಸಿದೆ.




