ಪುತ್ತೂರು: ಆಟೋ ರಿಕ್ಷಾ ಮತ್ತು ಬುಲೇರೊ ನಡುವೆ ಅಪಘಾತ: ಇಬ್ಬರಿಗೆ ಗಾಯ
ಪುತ್ತೂರು: ಮಾಣಿ ಮೈಸೂರು ರಾಷ್ಡ್ರೀಯ ಹೆದ್ದಾರಿ ದರ್ಬೆ ಸಮೀಪ ಆಟೋ ರಿಕ್ಷಾ ಮತ್ತು ಬುಲೇರೊ ಜೀಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ರಾತ್ರಿ ನಡೆದಿದೆ.
ಸೆಂಟ್ಯಾರು ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ಮತ್ತು ಪುತ್ತೂರು ಕಡೆ ಬರುತ್ತಿದ್ದ ಬುಲೇರೊ ಜೀಪ್ ನಡುವೆ ದರ್ಬೆ ಸಮೀಪ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಬುಲೇರೊ ಚಾಲಕ ಮತ್ತು ಆಟೋ ರಿಕ್ಷಾದಲ್ಲಿದ್ದ ಸೆಂಟ್ಯಾರಿನ ಇಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.




