ಸುಳ್ಯ ಮೊಗರ್ಪಣೆ ಎಸ್ ಎಸ್ ಎಫ್ ವತಿಯಿಂದ ರಂಜಾನ್ ಕಿಟ್ ವಿತರಣೆ
ಸುಳ್ಯ: ಮೊಗರ್ಪಣೆ ಎಸ್ ಎಸ್ ಎಫ್ ಶಾಖೆಯ ವತಿಯಿಂದ ರಂಜಾನ್ ಕಿಟ್ ವಿತರಣೆ ಕಾರ್ಯಕ್ರಮ ಇಂದು ನಡೆಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡ ಕಳೆದ 22 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಊರಿನ ದಾನಿಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಮೊಹಲ್ಲಾದ ಬಡ ಅನಾಥ ಕುಟುಂಬಗಳನ್ನು ಪವಿತ್ರ ರಂಜಾನ್ ದಿನದ ಉಪವಾಸ ಆಚರಣೆಗೆ ಅನುಕೂಲವಾಗುವ ದೃಷ್ಟಿಯಲ್ಲಿ ಈ ಸೇವೆಯನ್ನು ಸಂಘಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಕಿರ್ ಮೊಗರ್ಪಣೆ ತಿಳಿಸಿದರು.

ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಸಕಾಫಿ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಆಸಿಫ್, ಮುಖಂಡರುಗಳಾದ ಸಿದ್ದೀಕ್ ಕಟ್ಟೆ ಕಾರ್, ಶರೀಫ್ ಜಯನಗರ, ಜುನೈದ್ ಮೊಗರ್ಪಣೆ, ಸಮಿತಿ ಸದಸ್ಯರುಗಳಾದ ಮಿನ್ಹಾಜ್ ಅಂಜಿಕ್ಕಾರ್, ಮುನೀರ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.




