March 19, 2026

ದೇವಸ್ಥಾನಕ್ಕೆ ತೆರಳುತ್ತಿದ್ದ ಟ್ರಕ್ ಕಣಿವೆ ಬಿದ್ದು ಏಳು ಮಂದಿ ಮೃತ್ಯು

0
breaking-1611454332

ತಿರುಪತ್ತೂರ್: ದೇವಸ್ಥಾನಕ್ಕೆ ತೆರಳುತ್ತಿದ್ದ ಟ್ರಕ್ ಕಣಿವೆಗೆ ಬಿದ್ದ ಪರಿಣಾಮ 7 ಮಂದಿ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಸೆಂಬರೈ ಗ್ರಾಮದಲ್ಲಿ ನಡೆದಿದೆ.

ದೇವಾಲಯವು ಸೆಂಬರೈ ಗ್ರಾಮದ ಬೆಟ್ಟದ ಮೇಲಿದೆ. ಈ ದೇವಾಲಯಕ್ಕೆ ತೆರಳುವಾಗ ಮಾತುಕತೆಯಲ್ಲಿ ನಿರತನಾಗಿದ್ದ ಟ್ರಕ್‌ನ ಚಾಲಕನಿಗೆ ವಾಹನದ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯರೂ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ತೆರಳಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಘಟನೆ ಕುರಿತು ಸ್ಥಳದಲ್ಲಿದ್ದವರು ವೀಡಿಯೋ ಮಾಡಿದ್ದು, ನೀರಿನ ಬಾಟಲಿಗಳು ಮತ್ತು ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗಾಯಗೊಂಡವರು ಮತ್ತು ಮಕ್ಕಳು ನೆಲದಲ್ಲಿ ಬಿದ್ದುಕೊಂಡಿರುವ ದೃಶ್ಯ ಮನಕಲಕುವಂತಿದೆ ಎಂಬುದಾಗಿ ವರದಿ ತಿಳಿಸಿದೆ.
ಅಪಘಾತದ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!