March 19, 2026

ಸುರತ್ಕಲ್‌ನ ಶಿಬರೂರು ಸೇತುವೆ ಬಳಿ ಹುಲಿ: ವಿಡಿಯೋ ವೈರಲ್

0
image_editor_output_image938639737-1648876895403.jpg

ಸುರತ್ಕಲ್‌: ಸುರತ್ಕಲ್‌ ಹೊರವಲಯದ ಸೂರಿಂಜೆ ಕಿನ್ನಿಗೋಳಿ ರಸ್ತೆಯ ಶಿಬರೂರು ಸೇತುವೆ ಬಳಿ ಹುಲಿ ನೋಡಿದ್ದು, ಜನತೆ ಜಾಗ್ರತೆಯಿಂದ ಇರಬೇಕೆಂದು ಕೋರಿಕೊಂಡ ಆಡಿಯೋ/ವಿಡಿಯೋವೊಂದು ಸ್ಥಳೀಯರಲ್ಲಿ ಭೀತಿಗೆ ಕಾರಣವಾಗಿದೆ.

ಈ ವೀಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು,  ಮುಸ್ಲಿಂ ಭಾಷೆಯಲ್ಲಿ ಆಡಿಯೋ ಇದೆ. ಹುಲಿ ಸೇತುವೆ ದಾಟುವ ವೀಡಿಯೋ ತುಣುಕು ಸೇರಿಸಿ ವಾಟ್ಸ್‌ಆ್ಯಪ್‌ಗೆ ಹರಿಯಬಿಡಲಾಗಿತ್ತು. ಇದು ಭಾರೀ ಪ್ರಮಾಣದಲ್ಲಿ ಶೇರ್‌ ಕೂಡ ಆಗಿತ್ತು.

ಸ್ಥಳೀಯ ಕಂದಾಯ ಆಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹರಿಯ ಬಿಟ್ಟಿದ್ದು ಎಂದವರು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!