March 19, 2026

ಉಡುಪಿ: ಬಾಲಕರಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಚಂದ್ರ ಹೆಮ್ಮಾಡಿ ದೋಷಿ: ಕೋರ್ಟ್ ತೀರ್ಪು

0
image_editor_output_image1301927245-1648791950935.jpg

ಉಡುಪಿ: ಬಾಲಕರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಗಂಗೊಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆರೋಪಿ ಚಂದ್ರ ಕೆ. ಹೆಮ್ಮಾಡಿ ದೋಷಿಯೆಂದು ಉಡುಪಿ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಒಂದನೇ ಪ್ರಕರಣದಲ್ಲಿ ಸಂತ್ರಸ್ತ 15 ವರ್ಷದ ಬಾಲಕನನ್ನು ಶಾಲೆಯಲ್ಲಿ ಹಾಡುಗಾರನೆಬಂತೆ ಪರಿಚಯಿಸಿ ಕೊಂಡ ಆರೋಪಿ ಶಾಲಾ ಆಟದ ಮೈದಾನದಲ್ಲಿರುವಾಗ ಬೈಕ್‌ ಸವಾರಿ ಮಾಡಿಸುವ ನೆಪದಲ್ಲಿ ಬಾಲಕನನ್ನು ಶೌಚಾಲಯದೊಳಕ್ಕೆ ಕರೆಯಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ.

23 ಸಾಕ್ಷ್ಯಾಧಾರಗಳ ಪೈಕಿ 15 ಸಾಕ್ಷಿಗಳ ವಿಚಾರಣೆ ನಡೆಸಿದ್ದು, ನೊಂದ ಬಾಲಕ ನುಡಿದ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಚಂದ್ರ ಕೆ. ಹೆಮ್ಮಾಡಿ ಅಪರಾಧಿಯೆಂದು ತೀರ್ಪು ನೀಡಿದ ನ್ಯಾಯಾಲಯ 10 ವರ್ಷ ಜೈಲು ಹಾಗೂ ನೊಂದ ಬಾಲಕನಿಗೆ 25 ಸಾವಿರ ರೂ. ಪರಿಹಾರ ನೀಡಲು ಆದೇಶಿಸಿದೆ.

22 ಸಾಕ್ಷಿದಾರರ ಪೈಕಿ 14 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ನೊಂದ ಬಾಲಕನ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿಗಳು ಅಭಿಯೋಜನೆಗೆ ಪೂರಕವಾಗಿದ್ದು, ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದು ಹಾಗೂ ನೊಂದ ಬಾಲಕನಿಗೆ 25 ಸಾವಿರ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!