April 7, 2025

ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರ ಮಾರಣಾಂತಿಕ ಹಲ್ಲೆ ಖಂಡನೀಯ: ಪಾಪ್ಯುಲರ್ ಫ್ರಂಟ್

0

ಮೂಡಬಿದ್ರೆ: ಪ್ರತಿಷ್ಠಿತ ಯಾನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಪ್ರದಾಯಕ ವಸ್ತ್ರದಾರಣೆ ಕುರಿತ ಕಾರ್ಯಕ್ರಮದ ಅಂಗವಾಗಿ ಟೋಪಿ ಧರಿಸುವ ವಿಷಯದಲ್ಲಿ ತರ್ಕ ಮುಂದಿಟ್ಟು ಎಬಿವಿಪಿ ಗೆ ಸೇರಿದ ಸುಮಾರು 40 ರಷ್ಟಿದ್ದ ವಿದ್ಯಾರ್ಥಿಗಳು ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿದ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಮಂಗಳೂರು ಗ್ರಾಮಾಂತರ ಅಧ್ಯಕ್ಷ ನವಾಝ್ ಕಾವೂರು ಖಂಡಿಸಿದ್ದಾರೆ.

ಮಂಗಳೂರಿನಲ್ಲಿ ಸಂಘಪರಿವಾರದ ದುಷ್ಕರ್ಮಿಗಳು ವಿದ್ಯಾರ್ಥಿಗಳ ಮೇಲೆ ಅನೈತಿಕ ಪೋಲಿಸ್ ಗಿರಿ ನಡೆಸಿದ ದುಷ್ಕ್ರತ್ಯ ಮಾಸುವ ಮುನ್ನ ಮೂಡಬಿದ್ರೆಯಲ್ಲಿ ಸಂಘಪರಿವಾರದ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಯ ಕಾರ್ಯಕರ್ತರು ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಪುಂಡಾಟಿಕೆ ನಡೆಸಿದ್ದಾರೆ. ತ್ರಿಶೂಲ ದೀಕ್ಷೆಯಿಂದ ಪ್ರೇರಿತವಾಗಿರುವ ಸಂಘಪರಿವಾರದ ದುಷ್ಕರ್ಮಿಗಳಿಂದ ಜಿಲ್ಲೆಯಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದು
ಪೋಲಿಸ್ ಇಲಾಖೆ ಮೂಡಬಿದ್ರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ದ್ವೇಷ ದಿಂದ ನಡೆಸಿದ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮಾತ್ರವಲ್ಲ ಪೋಲಿಸ್ ಇಲಾಖೆ ದಾಳಿಕೋರರ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳುವುದರಲ್ಲಿ ಯಾವುದೇ ಹಸ್ತ ಕ್ಷೇಪ ನಡೆಸಬಾರದು ಎಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ.

ಜಿಲ್ಲೆಯಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಜನಸಾಮಾನ್ಯರ ಜನಜೀವನಕ್ಕೆ ಸಂಘಪರಿವಾರ ಮತ್ತು ಅದರ ಸಹಸಂಘಟನೆಗಳು ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಜಿಲ್ಲೆಯ ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವ ಸಂಘಪರಿವಾರದ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರೇ ಬೀದಿಗಿಳಿದು ಉಗ್ರ ಹೋರಾಟ ಮಾಡುವ ಅನಿವಾರ್ಯತೆ ಉಂಟಾಗಬಹುದು ಎಂದು ನವಾಝ್ ಕಾವೂರು ಎಚ್ಚರಿಸಿದ್ದಾರೆ.

 

 

Leave a Reply

Your email address will not be published. Required fields are marked *

error: Content is protected !!