March 23, 2026

ಆಂಟಿಯ ಕಿರುಕುಳ ತಾಳಲಾರದೆ ಸೆಲ್ಫಿ ವೀಡಿಯೋ ಮಾಡಿ, ಯುವಕ ವಿಷ ಸೇವಿಸಿ ಆತ್ಮಹತ್ಯೆ

0
image_editor_output_image125154853-1648357661339

ಚಿಕ್ಕಬಳ್ಳಾಪುರ: ಆಕೆಗೆ ಈಗಾಗಲೇ ಮದುವೆ ಆಗಿದೆ. ಆದರೂ ಆಕೆ ಯುವಕನೊಬ್ಬನ ಜತೆ ಅಕ್ರಮ ಸಂಬಂಧ ಬೆಳೆದಿತ್ತು. ಇದೀಗ ಆ ಆಂಟಿಯ ಕಿರುಕುಳ ತಾಳಲಾರದೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಕುಂದಲಗುರ್ಕಿ ಗ್ರಾಮದಲ್ಲಿ ಸಂಭವಿಸಿದೆ.

ಮುನಿಕೃಷ್ಣ(28) ಮೃತ ದುರ್ದೈವಿ.
ಆರಂಭದಲ್ಲಿ ಚೆನ್ನಾಗಿಯೇ ಇಬ್ಬರೂ ಚೆನ್ನಾಗಿದ್ದರು. ಆದರೆ ಬರಬರುತ್ತಾ ಮುನಿಕೃಷ್ಣ ಆಂಟಿಯಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದ.

ಈ ವಿಚಾರ ಗೊತ್ತಾಗುತ್ತಿದ್ದಂತೆ ಯುವಕನ ಬೆನ್ನತ್ತಿದ ಆಕೆ, ನೀನು ನನಗೇ ಬೇಕು. ಯಾರಿಗೂ ನಾನು ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿದಿದ್ದಳು.

ಪ್ರೇಯಸಿಯ ಕಿರುಕುಳ ತಾಳಲಾರದೇ ಯುವಕ ದುರಂತ ಅಂತ್ಯ ಕಂಡಿದ್ದಾನೆ.
ಪರಸ್ತ್ರೀ ಜತೆಗಿನ ಸಲ್ಲಾಪ ಯುವಕ ಪ್ರಾಣವನ್ನೇ ಬಲಿ ಪಡೆದಿದೆ. ಇಂತಹ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಕುಂದಲಗುರ್ಕಿ ಗ್ರಾಮದಲ್ಲಿ ಸಂಭವಿಸಿದೆ.

ಮುನಿಕೃಷ್ಣಗೆ ವಿವಾಹಿತ ಮಹಿಳೆ ಜತೆ ಅನೈತಿಕ ಸಂಬಂಧವಿತ್ತು. ಇತ್ತೀಚಿಗೆ ಈತ ಬೇರೊಬ್ಬ ಯುವತಿ ಜತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ.

ಈ ವಿಚಾರ ತಿಳಿದು ಕೆಂಡಾಮಂಡಲವಾಗಿದ್ದ ಪ್ರೇಯಸಿ, ಮುನಿಕೃಷ್ಣಗೆ ಮಾನಸಿಕ ಕಿರುಕುಳ ಕೊಡಲಾರಂಭಿಸಿದ್ದಳು. ಆಕೆಯ ಕಾಟ ಸಹಿಸಲಾಗದೆ ಬೇಸತ್ತ ಯುವಕ,

ಸೆಲ್ಫಿ ವಿಡಿಯೋ ಮಾಡಿ‌ ತಲೆತಲೆ ಚಚ್ಚಿಕೊಂಡು, ಕೆನ್ನೆಗೆ ಫಟಫಟನೆ ಹೊಡೆದುಕೊಂಡು ತಾನು ತಪ್ಪು ಮಾಡಿಬಿಟ್ಟೆ ಎಂಬಂತೆ ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷ ಸೇವಿಸುವ ದೃಶ್ಯ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!