May 11, 2026

ಹೈದ್ರಾಬಾದ್: ಗುಜರಿ ಗೋಡೌನ್‌ನಲ್ಲಿ 11 ಜನ ವಲಸಿಗರ ಸಜೀವ ದಹನ

0
image_editor_output_image296706730-1648020266427.jpg

ತೆಲಂಗಾಣ: ಹೈದ್ರಾಬಾದ್‌ನ ಭೋಯಿಗುಡಾದಲ್ಲಿದ್ದ ಗುಜರಿ ಗೋಡೌನ್‌ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ತಗುಲಿದೆ. ಇದರ ಪರಿಣಾಮ ಬರೋಬ್ಬರಿ 11 ಜನ ಮೃಪಟ್ಟಿದ್ದಾರೆ. ಒಬ್ಬ ಬಚಾವ್ ಆಗಿದ್ದಾನೆ.

ಸ್ಕ್ರಾಪ್ ಗೋಡೌನ್‌ನಲ್ಲಿ ಬೆಂಕಿಯ ಭಾರಿ ಅನಾಹುತಕ್ಕೆ ಮೃತಪಟ್ಟವರೆಲ್ಲ ಬಿಹಾರ್ ಮೂಲದವರೇ ಆಗಿದ್ದಾರೆ. ಕೆಲಸವನ್ನ ಅರಸಿಕೊಂಡು ಇಲ್ಲಿಗೆ ಬಂದಿದ್ದರು.

ಗೋಡೌನ್‌ನ ಫಸ್ಟ್ ಫ್ಲೋರ್‌ನಲ್ಲಿ ಮಲಗಿಕೊಂಡಿದ್ದರು. ಬುಧವಾರ ಬೆಳಗಿನ ಜಾವ 4 ಗಂಟೆಗೆ ಬೆಂಕಿ ಹತ್ತಿದೆ. ಒಳಗಿದ್ದ 12 ಜನರಲ್ಲಿ 11 ಜನ ಮೃತಪಟ್ಟಿದ್ದಾರೆ.

ಈ ವಿಷಯವನ್ನ ಪೊಲೀಸರು ಈಗ ಹೇಳಿದ್ದಾರೆ. ಅಗ್ನಿ ಶಾಮಕ ದಳ ಸ್ಥಳಕ್ಕೆ ಬಂದು ಅಗ್ನಿ ನಂದಿಸೋ ಕೆಲಸ ಮಾಡುತ್ತಿದೆ ಅಂತಲೂ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!