March 23, 2026

ಇಂದು ಮತ್ತೊಂದು ಖಾಸಗಿ ಬಸ್‌ ಪಲ್ಟಿ: ಬೈಕ್ಗೆ ಡಿಕ್ಕಿ ತಪ್ಪಿಸಲು ಹೋಗಿ ಪಲ್ಟಿಯಾಗಿ 10 ಮಂದಿಗೆ ಗಾಯ

0
image_editor_output_image-206495902-1647775520161.png

ಚಾಮರಾಜನಗರ: ತುಮಕೂರು ಜಿಲ್ಲೆಯಲ್ಲಿ ನಿನ್ನೆಯಷ್ಟೇ ಭೀಕರ ಬಸ್ ಅಪಘಾತ ಸಂಭವಿಸಿ ಐದು ಮಂದಿ ಸಾವನ್ನಪ್ಪಿದ್ದಾರೆ.

ಇದರ ಬೆನ್ನಲ್ಲೇ ಬೈಕ್​ಗೆ ಡಿಕ್ಕಿ ತಪ್ಪಿಸಲು ಹೋಗಿ ಖಾಸಗಿ ಬಸ್ಸೊಂದು ಪಲ್ಟಿಯಾಗಿರುವ ಘಟನೆ ಹನೂರು ತಾಲೂಕಿನ ಕಾಮಗೆರೆ ಸಮೀಪ ಇಂದು ಸಂಭವಿಸಿದೆ.

ಘಟನೆಯಲ್ಲಿ 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಈ ಪೈಕಿ ಮೂವರಿಗೆ ತೀವ್ರಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ‌.

ಹನೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ಇದಾಗಿದ್ದು, ಏಕಾಏಕಿ ಬೈಕ್ ಸವಾರನೋರ್ವ ನುಗ್ಗಿ ಬಂದಿದ್ದರಿಂದ ಡಿಕ್ಕಿ ತಪ್ಪಿಸಲು ಹೋಗಿ ಬಲಭಾಗದ ಹಳ್ಳಕ್ಕೆ ಬಸ್​ ಪಲ್ಟಿಯಾಗಿದೆ ಎನ್ನಲಾಗ್ತಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದು ಒಂದೇ ವಾರದಲ್ಲಿ ರಾಜ್ಯದಲ್ಲಿ ನಡೆದ ನಾಲ್ಕನೇ ಪ್ರಕರಣವಾಗಿದ್ದು, ಹನೂರು ತಾಲೂಕಿನಲ್ಲಿ ಒಂದೇ ವಾರದಲ್ಲಿ ಸಂಭವಿಸಿದ ಎರಡನೇ ಘಟನೆ ಇದಾಗಿದೆ

Leave a Reply

Your email address will not be published. Required fields are marked *

error: Content is protected !!