ಭಗವದ್ಗೀತೆಯನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಬೇಕು: ಸಂಸದ ಪ್ರತಾಪ್ ಸಿಂಹ
ಮಡಿಕೇರಿ : ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ, ಅದನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸುವುದು ತಪ್ಪಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅವರು ಶನಿವಾರ ಹೇಳಿಕೆ ನೀಡಿದ್ದಾರೆ.
ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಭಗವದ್ಗೀತೆಯಲ್ಲಿ ನೀತಿ ಪಾಠ,ನೈತಿಕ ವಿಚಾರಗಳಿವೆ. ಯಾವುದು ಸರಿ ತಪ್ಪೆಂದು ಅದರಲ್ಲಿ ಅರ್ಥಪೂರ್ಣವಾಗಿ ತಿಳಿಸಲಾಗಿದೆ ಎಂದರು.
ಕುರಾನ್, ಬೈಬಲ್ ಧಾರ್ಮಿಕ ಗ್ರಂಥಗಳು.ಭಗವದ್ಗೀತೆ ಬೇರೆ ಧರ್ಮ ಗ್ರಂಥಗಳ ರೀತಿ ಧರ್ಮದ ಬಗ್ಗೆ ತಿಳಿಸಲ್ಲ.ಬೇರೆ ಗ್ರಂಥಗಳಂತೆ ಭಗವದ್ಗೀತೆಯನ್ನ ನೋಡಲು ಹೋಗಬೇಡಿ. ಭಗವದ್ಗೀತೆ ಪ್ರತಿಯೋಬ್ಬರು ಓದಲೇ ಬೇಕಾದ ಗ್ರಂಥ ಎಂದು ಅಭಿಪ್ರಾಯ ಪಟ್ಟರು.
ಈಗಾಗಲೇ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆ ವಿಚಕ್ಕೆ ಸಂಬಂಧಿಸಿ ಪರ ವಿರೋಧದ ಚರ್ಚೆಗಳು ಜೋರಾಗುತ್ತಿವೆ.




