March 23, 2026

ಯುವತಿಯರಿಗೆ ಚುಡಾಯಿಸುತ್ತಿದ್ದವರಿಗೆ ಬುದ್ಧಿವಾದ ಹೇಳಿದ್ದಕ್ಕೆ ಯುವಕನ ಕೊಲೆ: ಇಬ್ಬರು ಸಹೋದರರು ಸೇರಿ ಆರು ಮಂದಿಯ ಬಂಧನ

0
IMG-20220319-WA0004.jpg

ಬೆಂಗಳೂರು: ಯುವತಿಯರಿಗೆ ಚುಡಾಯಿಸುತ್ತಿದ್ದವರಿಗೆ ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬನನ್ನು ಕೊಲೆಗೈದಿದ್ದ ಇಬ್ಬರು ಸಹೋದರರು ಸೇರಿ ಆರು ಮಂದಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಕೆ.ಪಿ. ಅಗ್ರಹಾರ ನಿವಾಸಿಗಳಾದ ಸೂರ್ಯ (32) ಮತ್ತು ಆತನ ಸಹೋದರ ಚಂದನ್‌(28) ಹಾಗೂ ಸಹಚರರಾದ ಪ್ರಮೋದ್‌ (32), ಸತೀಶ್‌ (27), ಚೇತನ್‌ (30) ಬಂಧಿತರು. ಆರೋಪಿಗಳು ಮಾ. 11ರಂದು ರಾತ್ರಿ ಥಾಮಸ್‌ (20) ಅವರಿಗೆ ಮಾರಕಾಸ್ತ್ರಗಳಿಂದ ಇರಿದು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ದೂರುದಾರ ಲಕ್ಷ್ಮೀಕಾಂತ್‌ ಮತ್ತು ಕೊಲೆಯಾದ ಥಾಮಸ್‌ ಸ್ನೇಹಿತರಾಗಿದ್ದಾರೆ. ಕೆಲ ದಿನಗಳಿಂದ ಆರೋಪಿಗಳ ಪೈಕಿ ಚಂದನ್‌, ದೂರುದಾರರ ಮನೆ ಮುಂಭಾಗ ಬೈಕ್‌ ವೀಲ್ಲಿಂಗ್‌ ಮಾಡುವುದು, ಸಿಗರೇಟ್‌ ಸೇದುವುದು ಮಾಡುತ್ತಿದ್ದ. ಈ ವಿಚಾರವನ್ನು ಲಕ್ಷ್ಮೀಕಾಂತ್‌, ಥಾಮಸ್‌ ಬಳಿ ಹೇಳಿಕೊಂಡಿದ್ದಾನೆ. ಬಳಿಕ ಮತ್ತೂಬ್ಬ ಸ್ನೇಹಿತ ಮನೋಜ್‌ ಎಂಬಾತ ಜತೆ ಹೋಗಿ, ಚಂದನ್‌ ಮತ್ತು ಸೂರ್ಯಗೆ ಬುದ್ದಿ ಹೇಳಿದ್ದಾರೆ. ಆದರೂ ಆರೋಪಿಗಳು ಸುಧಾರಿಸಿರಲಿಲ್ಲ. ಕೆಲ ದಿನಗಳ ಬಳಿಕ ಥಾಮಸ್‌, ಲಕ್ಷ್ಮೀಕಾಂತ್‌ ಮತ್ತು ಮನೋಜ್‌, ಆರೋಪಿಯ ತಂದೆ ರಮೇಶ್‌ಗೆ, ತಮ್ಮ ಮಗ ಮನೆ ಮುಂದೆ ಬಂದು ಕಿರುಕುಳ ಕೊಡುತ್ತಿದ್ದಾನೆ. ಆತನಿಗೆ ಬುದ್ದಿವಾದ ಹೇಳುವಂತೆ ಮನವಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

Leave a Reply

Your email address will not be published. Required fields are marked *

error: Content is protected !!