May 11, 2026

ವೇಣೂರು: ಟೆಂಪೋ ಢಿಕ್ಕಿ, ಕಾಲೇಜಿನ ಪ್ರಾಧ್ಯಾಪಕನಿಗೆ ಗಾಯ

0
IMG-20220319-WA0003.jpg

ವೇಣೂರು: ಬೈಕ್ ಮತ್ತು 407 ಟೆಂಪೋ ನಡುವೆ ಢಿಕ್ಕಿ ಹೊಡೆದ ಪರಿಣಾಮ ಕಾಲೇಜಿನ ಪ್ರಾಧ್ಯಾಪಕ ಗಾಯಗೊಂಡ ಘಟನೆ ಮುದ್ದಾಡಿ ರಸ್ತೆಯಲ್ಲಿ ನಡೆದಿದೆ.

ಬಂಟ್ವಾಳ ತಾಲ್ಲೂಕಿನ ನೈನಾಡು ಪಿಲತಬೆಟ್ಟು ಗ್ರಾಮದ ಮಿತ್ತೊಟ್ಟು ನಿವಾಸಿ, ಮೂಡಬಿದಿರೆ ರೋಟರಿ ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರದೀಪ ಭಟ್ (28) ಗಾಯಾಳು.

ಪ್ರದೀಪ ಭಟ್ ನಯನಾಡು ಕಡೆಯಿಂದ ಕರ್ತವ್ಯಕ್ಕೆ ಬರುತ್ತಿದ್ದ ವೇಳೆ ವೇಣೂರು ಸಮೀಪದ ಕಾಮೆಟ್ಟು ಬಳಿಯ ತಿರುವಿನಲ್ಲಿ ಎದುರಿನಿಂದ ಬಂದ ಟೆಂಪೋ ಢಿಕ್ಕಿ ಹೊಡೆದಿದೆ.

Leave a Reply

Your email address will not be published. Required fields are marked *

error: Content is protected !!