February 3, 2026

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: 103 ವರ್ಷದ ವೃದ್ಧನಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ

0
Screenshot_2022-03-19-11-31-14-73_680d03679600f7af0b4c700c6b270fe7.jpg

ಚೆನ್ನೈ: 103 ವರ್ಷ ವೃದ್ದನು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದ್ದು, ತಮಿಳುನಾಡಿನ ವಿಚಾರಣಾ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

ಚೆನ್ನೈನ ಹೊರವಲಯದಲ್ಲಿರುವ ಪೂನಮಲ್ಲಿಯ ಸೆಂನೀರ್ಕುಪ್ಪಂನಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯನಾಗಿರುವ ಕೆ.ಪರಶುರಾಮನ್‌ ಐದು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದ. ಅಲ್ಲೇ ಹತ್ತಿರದಲ್ಲಿ ಮತ್ತೂಂದು ಮನೆಯಲ್ಲಿ ವಾಸಿಸುತ್ತಿದ್ದ ಆತ ತನ್ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಾಲಕಿಗೆ ಚಾಕಲೇಟ್‌ ತೋರಿಸಿ ಮನೆಗೆ ಕರೆದು ಲೈಂಗಿಕ ಕಿರುಕುಳ ಕೊಟ್ಟಿದ್ದ. ಈ ವಿಚಾರವನ್ನು ಬಾಲಕಿ ತಂದೆ ತಾಯಿ ಮುಂದೆ ಬಾಯಿ ಬಿಟ್ಟಿದ್ದಳು. ಆ ಹಿನ್ನೆಲೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

2018 ರಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತ ಆರೋಪಿ ಕೆ ಪರಶುರಾಮನ್ ಗೆ 99 ವರ್ಷ ವಯಸ್ಸಾಗಿತ್ತು.

ಗುರುವಾರ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಲಾಗಿದೆ. ಬಾಲಕಿಯ ಕುಟುಂಬಕ್ಕೆ 45,000 ರೂ. ಪರಿಹಾರ ನೀಡಲೂ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!