February 2, 2026

ಅಸಾನಿ ಚಂಡಮಾರುತ ಭೀತಿ: ಮಾ. 21ರಂದು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ

0
Screenshot_2022-03-18-14-17-55-60_680d03679600f7af0b4c700c6b270fe7.jpg

ನವದೆಹಲಿ: ನೈಋತ್ಯ ಹಿಂದೂ ಮಹಾಸಾಗರದ ಮೇಲಿನ ಕಡಿಮೆ ಒತ್ತಡದ ಪ್ರದೇಶದಲ್ಲಿ ಮುಂದಿನ ವಾರ ಚಂಡಮಾರುತ ತೀವ್ರಗೊಂಡು ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕಡೆಗೆ ಚಲಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಾ. 21ಕ್ಕೆ ಮೀನುಗಾರರಿಗೆ ದಕ್ಷಿಣ ಬಂಗಾಳ ಕೊಲ್ಲಿ, ಸಮಭಾಜಕ ಹಿಂದೂ ಮಹಾಸಾಗರದ ಪಕ್ಕದ ಮಧ್ಯ ಭಾಗ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಕರಾವಳಿಗೆ ತೆರಳದಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಮಂಗಳವಾರ ರೂಪುಗೊಂಡ ಕಡಿಮೆ ಒತ್ತಡದ ಪ್ರದೇಶ (ಎಲ್‌ಪಿಎ) ಪೂರ್ವ-ಈಶಾನ್ಯಕ್ಕೆ ಚಲಿಸುವ ನಿರೀಕ್ಷೆಯಿದೆ ಮತ್ತು ಶನಿವಾರದ ವೇಳೆಗೆ ಸಂಪೂರ್ಣವಾಗಿ ಎಲ್‌ಪಿಎ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕಡೆಗೆ ಚಲಿಸುವ ಮೊದಲು ಕಡಿಮೆ ಒತ್ತಡದ ಪ್ರದೇಶವಾಗಿ ತೀವ್ರಗೊಂಡಿತು ಎಂದು ತಿಳಿಸಿದೆ.

ಹವಾಮಾನ ವ್ಯವಸ್ಥೆಯು ಮಾರ್ಚ್ 21 ರಂದು ಚಂಡಮಾರುತವು ತೀವ್ರಗೊಳ್ಳಲಿದ್ದು, ಮಾರ್ಚ್ 22 ರ ವೇಳೆಗೆ ಉತ್ತರ-ವಾಯುವ್ಯಕ್ಕೆ ಚಲಿಸುವ ಮುನ್ಸೂಚನೆ ಇದೆ. ಇದು ಚಂಡಮಾರುತವಾಗಿ ಮಾರ್ಪಟ್ಟಾಗ, ಶ್ರೀಲಂಕಾ ಸೂಚಿಸಿದ ಹೆಸರನ್ನು ‘ಅಸಾನಿ’ ಎಂದು ಹೆಸರಿಸಲಾಗುವುದು.

Leave a Reply

Your email address will not be published. Required fields are marked *

error: Content is protected !!