August 21, 2026

ಕಡಬ: ಮರದಿಂದ ಬಿದ್ದು ಬಾಲಕ ಮೃತ್ಯು: ಪೇರಳೆ ಹಣ್ಣು ತೆಗೆಯಲು ಮರಕ್ಕೆ ಹತ್ತಿದ್ದ ಬಾಲಕ

0
image_editor_output_image918744310-1647584829684.png

ಕಡಬ: ಸ್ಕೂಲ್ ಮುಗಿಸಿ ಸಂಜೆ ಮನೆಗೆ ಬಂದ ಬಾಲಕನೊಬ್ಬ ಪೇರಳೆ ಹಣ್ಣು ತೆಗೆಯಲು ಮರ ಹತ್ತಲು ಹೋಗಿ ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಬಳಿ ನಿನ್ನೆ ಸಂಜೆ ನಡೆದಿದೆ.

ಎಡಮಂಗಲ ಸಮೀಪದ ದೋಳ್ಪಾಡಿ ಮರಕ್ಕಡ ಮನೆಯ ದಿವಾಕರ ಗೌಡರವರ ಪುತ್ರ ಉಲ್ಲಾಸ್ ಡಿ.ಎಂ (8) ಮೃತ ಬಾಲಕ.
ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಹಿಂತಿರುಗಿದ ಬಳಿಕ ಮನೆ ಸಮೀಪದ ಪೇರಳೆ ಹಣ್ಣು ಕೊಯ್ಯಲು

ಮರಕ್ಕೆ ಹತ್ತಿದ್ದು ಈ ವೇಳೆ ಅಯತಪ್ಪಿ ಕೆಳಕ್ಕೆ ಉರುಳಿದಾಗ ತಲೆ ಭಾಗಕ್ಕೆ ಗಂಭಿರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

ಈತ ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ.

ಸದ್ಯ‌ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತ ಉಲ್ಲಾಸ್ ತಂದೆ ದಿವಾಕರ್ , ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!