August 21, 2026

ಹಿಜಾಬ್ ಹಿನ್ನೆಲೆ: ಪರೀಕ್ಷೆಗೆ ಗೈರು ಹಾಜರಿಯಾದವರಿಗೆ ಮರು ಪರೀಕ್ಷೆ ಇಲ್ಲ: ಜೆ.ಸಿ.ಮಾಧುಸ್ವಾಮಿ

0
Screenshot_2022-03-18-09-20-03-72_680d03679600f7af0b4c700c6b270fe7.jpg

ಬೆಂಗಳೂರು: ಹಿಜಾಬ್‌ ಗೊಂದಲದ ಸಂದರ್ಭ ಹೈಕೋರ್ಟ್‌ನ ಮಧ್ಯಾಂತರ ತೀರ್ಪು ಬರುವ ಮುನ್ನ  ಪರೀಕ್ಷೆಗಳಿಗೆ ಹಾಜ ರಾಗದ ವಿದ್ಯಾರ್ಥಿಗಳಿಗೆ ಹಿಜಾಬ್‌ ಧರಿಸದೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸ ದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಆದರೆ ಮಧ್ಯಾಂತರ ಆದೇಶದ ಅನಂತರ ಪರೀಕ್ಷೆ ಗೈರು ಹಾಜರಿಯಾದವರಿಗೆ ಮರು ಪರೀಕ್ಷೆ ಅವ ಕಾಶ ಕಷ್ಟ ಸಾಧ್ಯ ಎಂದಿದ್ದಾರೆ.

ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್‌, ಹಿಜಾಬ್‌ ಗೊಂದಲ ಸಂದರ್ಭ ಕೆಲವರಿಗೆ ಪರೀಕ್ಷೆ ಬರೆಯಲಾಗಿರಲಿಲ್ಲ. ಈಗ ಹಿಜಾಬ್‌ ತೆಗೆದು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಅವರಿಗೆ ಅವಕಾಶ ಕಲ್ಪಿಸಬೇಕು ಹಾಗೂ ಹೈಕೋರ್ಟ್‌ ಆದೇಶ ಬಂದ ಅನಂತರವೂ ಪಾಲಿಸದೇ ಗೊಂದಲ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!