February 2, 2026

ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ವಾರ್ಷಿಕೋತ್ಸವ: ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನ

0
IMG-20220317-WA0052.jpg

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಬಾ ಮತ್ತು ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜನಪ್ರಿಯ ಪೌಂಡೇಶನ್ ಚೇಯರ್ ಮ್ಯಾನ್ ಡಾ. ವಿ.ಕೆ ಅಬ್ದುಲ್ ಬಶೀರ್ ಅವರು ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಒಂದು ಉತ್ತಮ ಶಿಕ್ಷಣ ಕೇಂದ್ರವನ್ನು ರೂಪಿಸುವುದೇ ನಮ್ಮ ಧ್ಯೇಯವಾಗಿತ್ತು. ಹೆತ್ತವರ, ವಿದ್ಯಾಭಿಮಾನಿಗಳ ಸಹಕಾರ ಪ್ರೋತ್ಸಾಹ ಅತ್ಯಂತ ಸಕಾಲಿಕವಾಗಿದೆ. ಈ ಸಂಸ್ಥೆಗೆ ಜಿಲ್ಲೆಯಲ್ಲಿಯೇ ಗುರುತಿಸಲ್ಪಡುವ ಕೇಂದ್ರವಾಗುವ ಭವಿಷ್ಯವಿದೆ ಎಂದರು.

ಶಿಕ್ಷಣ ತಂಙ್ಞ ಡಾ. ರವಿಕುಮಾರ್ ಮಾತನಾಡಿ ಇಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣದ ಜತೆಗೆ ಜೀವನದಲ್ಲಿ ನಾಯಕತ್ವದ ಗುಣವನ್ನು ಕಲಿಸಿಕೊಡಲಾಗುತ್ತದೆ. ಶಿಕ್ಷಣ ಗುಣಮಟ್ಟವು ಉತ್ತಮವಾಗಿ ಸಿಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ ಮತ್ತು ಹರೇಕಳ ಹಾಜಬ್ಬ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ್ ನಾಯಕ್, ಮಾಜಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ಅಬ್ದುಲ್ ಖಾದರ್ ಬದ್ರಿಯಾ, ಜನಪ್ರಿಯ ಫೌಂಡೇಶನ್ ಅಧ್ಯಕ್ಷೆ ಫಾತಿಮಾ ನಸ್ರೀನ ಬಶೀರ್, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದೀಕ್, ಶಾಲಾ ಆಡಳಿತಾಧಿಕಾರಿ ಸಫ್ವಾನ್ ಯು.ಎ ಮೊದಲಾದವರು ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಶೈಲಜಾ ಶೆಟ್ಟಿ ವರದಿ ಮಂಡಿಸಿದರು. ವಿದ್ಯಾರ್ಥಿ ಇಂಶಾ ಫಾತಿಮ ಸ್ವಾಗತಿಸಿದರು. ಸಹನ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!