ಸುಳ್ಯ.ಗೂನಡ್ಕ ಮಸೀದಿ ಜಾಗ ವಿವಾದ: ಮಸೀದಿ ಮದರಸಾ ತೆರವುಗೊಳಿಸಲು ಸಂಘ ಪರಿವಾರ ಪಟ್ಟು: ಯಾವುದೇ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವುದಿಲ್ಲ ಮಸೀದಿ ಆಡಳಿತ ಮಂಡಳಿ
ಸ್ಪಷ್ಟನೆ
ಸುಳ್ಯ: ಗೂನಡ್ಕದಲ್ಲಿ ಮೀಸಲು ಅರಣ್ಯದ ಜಾಗದಲ್ಲಿ ಅಕ್ರಮವಾಗಿ ಮದರಸಾ ದಫನ ಭೂಮಿ ನಿರ್ಮಿಸಲಾಗಿದೆ. 20 ಸೆಂಟ್ಸ್ ಜಾಗವನ್ನು ಅಕ್ರಮ ವಶಪಡಿಸಿಕೊಂಡು ಅಲ್ಲಿ ಅಕ್ರಮವಾದ ಮಸೀದಿ ಮತ್ತು ಮದರಸವನ್ನು ನಿರ್ಮಿಸಿ ಅಕ್ರಮವಾಗಿ ದಫನ ಮಾಡುವುದು ಕಂಡುಬಂದಿದೆ ಎಂದು ಸಂಘ ಪರಿವಾರ ತಿಳಿಸಿತ್ತು. ಈ ಬಗ್ಗೆ ಮಸೀದಿ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಸ್ಥಳೀಯವಾಗಿ ಅರಣ್ಯ ಇಲಾಖೆಗೆ ದೂರು ನೀಡಿದ ಸಂದರ್ಭದಲ್ಲಿ ನಿಗದಿಪಡಿಸಿದ ಅವಧಿಯೊಳಗೆ ಒತ್ತುವರಿದಾರರು ತೆರವು ಮಾಡದೇ ಇದ್ದಲ್ಲಿ ಇಲಾಖಾ ವತಿಯಿಂದ ಒತ್ತುವರಿ ಪ್ರದೇಶದಲ್ಲಿ ನಿರ್ಮಿಸಿದ ಕಟ್ಟಡ ರಚನೆಗಳು ಮತ್ತು ಯಾವುದೇ ಬೆಲೆ ಇದ್ದಲ್ಲಿ ನಿಯಮಾನುಸಾರ ಕಿತ್ತುಹಾಕಿ ತೆರವುಗೊಳಿಸಿ ಭೂಮಿಯನ್ನು ಇಲಾಖ ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ಭೂಮಿಯನ್ನು ಅದರ ಮೂಲ ಸ್ಥಿತಿಗೆ ತರಲು ತಗಲುವ ವೆಚ್ಚವನ್ನು ಒತ್ತುವರಿದಾರರು ಕರ್ನಾಟಕ ಅರಣ್ಯಇಲಾಖೆ ಕಾಯಿದೆ ಪ್ರಕಾರ 1963 ರ ಕಲಂ 109 ರ ಪ್ರಕಾರ ವಸೂಲಿ ಮಾಡಬೇಕೆನ್ನುವ ಆದೇಶವನ್ನು ಎಸಿಎಫ್ ಕೋರ್ಟ್ ಮಾಡಿದೆ. ಎಸಿಎಫ್ ಕೋರ್ಟಿ ನ ಆದೇಶವನ್ನು ಸಿಸಿಎಫ್ ಕೋರ್ಟ್ ಕೂಡ ಎತ್ತಿಹಿಡಿದು ಅದೇ ಆದೇಶವನ್ನು ಜಾರಿಗೊಳಿಸಿದೆ. ಆದ್ದರಿಂದ ಕೋರ್ಟ್ ಆದೇಶವನ್ನು ಪಾಲನೆ ಮಾಡಿ ಜಾಗವನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಬೇಕು ಮತ್ತು ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನೀಡಿದ ಗೂನಡ್ಕ ಮಸೀದಿ ಕಮಿಟಿ ಕಾರ್ಯದರ್ಶಿ ಉಮ್ಮರ್ 1977 ರಲ್ಲಿ ದಿ.ಕೀಲಾರು ಗೋಪಾಲ ಕೃಷ್ಣಯ್ಯ ರವರು ಧಾನವಾಗಿ ನೀಡಿದ ಸ .ನಂ 89/2 ರ ೦.11 ಎಕ್ರೆ ಭೂಮಿಯಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಂ ಮದ್ರಸಾ ಗಳು ಕಾರ್ಯಾಚರಿಸುತ್ತಾ ಬಂದಿರುತ್ತದೆ.
2011 ನೇ ಇಸವಿಯಲ್ಲಿ ನಾವು ನಮ್ಮ ಮೂಲ ಜಮಾಅತ್ ಆದ ಪೇರಡ್ಕ ಜುಮ್ಮಾ ಮಸೀದಿಯಿಂದ ಬೇರ್ಪಟ್ಟು ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಗೆ ಪ್ರತ್ಯೇಕವಾಗಿ ಆಡಳಿತ ಮಂಡಳಿಯನ್ನು ರಚಿಸಿ ನೂತನ ಮೊಹಲ್ಲಾ ವ್ಯಾಪ್ತಿಯಲ್ಲಿ ದಫನ ಭೂಮಿಯ ಅಗತ್ಯವಿರುವ ಕಾರಣ ಬದ್ರಿಯಾ ಜುಮ್ಮಾ ಮಸೀದಿಗೆ ಹೊಂದಿಕೊಂಡಿರುವ ಸರಕಾರಿ ಭೂಮಿಯನ್ನು ದಪನ ಭೂಮಿಗಾಗಿ ಕಾನೂನಾತ್ಮಕ ರೀತಿಯಲ್ಲಿ ಕಂದಾಯ ಇಲಾಖೆಯಲ್ಲಿ ಕೇಳಿ ಕೊಂಡದ್ದಾಗಿರುತ್ತದೆ.
ಕಂದಾಯ ಇಲಾಖೆಯವರು ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಮಾನ್ಯ ಸಹಾಯಕ ಆಯುಕ್ತರು ಪುತ್ತೂರು ಇವರು ಸ. ನಂ 88/1p2ರಲ್ಲಿ ೦.20 ಭೂಮಿ ಯನ್ನು ಮುಸ್ಲಿಂ ದಫನ ಭೂಮಿಯಾಗಿ ಮೀಸಲಿಟದ್ದಾಗಿದೆ.
ಅಲ್ಲದೇ ಸ.ನಂ 89/2ರಲ್ಲಿ 0. 11ಎಕ್ರೆ ಮತ್ತು 88/1p2ರರಲ್ಲಿ ೦.20 ಎಕ್ರ ಭೂಮಿಯು ಕರ್ನಾಟಕ ರಾಜ್ಯ ವಖ್ಫ್ ಮಂಡಳಿಯಲ್ಲಿ ನೊಂದಾವಣೆ ಆಗಿರುತ್ತದೆ.
ಇವೆಲ್ಲವನ್ನು ನಾವು ಕಾನೂನಾತ್ಮವಾಗಿ ಮಾಡಿಕೊಂಡಿದ್ದೇವೆ.
ಸುಮಾರು 43 ವರ್ಷಗಳಿಂದ ದಾರ್ಮಿಕ ಕಾರ್ಯಚಟುವಟಿಕೆಗಳನ್ನು ಮಾಡಿಕೊಳ್ಳುತ್ತಿರುವ ಜಾಗವನ್ನು ಇತ್ತೀಚೆಗೆ ಒತ್ತುವರಿ ಮಾಡಿಕೊಂಡಿರುವುದಾಗಿ ಕೆಲವರು ವಾರ್ತಾಮಾದ್ಯಮಗಳಲ್ಲಿ ಬಿಂಬಿಸಲಾಗುತ್ತಿದ್ದು ಇವೆಲ್ಲಾ ಸತ್ಯಕ್ಕೆದೂರವಾದುದಾಗಿರುತ್ತದೆ.
ಮಾಹಿತಿಯ ಕೊರೆತೆ ಮತ್ತು ಒಬ್ಬ ವ್ಯಕ್ತಿಯ ತಪ್ಪು ಸಂದೇಶ ಗಳಿಂದ ಈ ರೀತಿಯ ಹೇಳಿಕೆ ನೀಡಿರಬಹುದೆಂದು ನಾವು ಬಾವಿಸುತ್ತೇವೆ.
ಸದ್ರಿ ದಫನ ಭೂಮಿ ಮಂಜೂರಾತಿಗೆ ಸಂಬಂಧಿಸಿದ ದಾಖಲೆಗಳೆಲ್ಲವು ನಮ್ಮಲ್ಲಿದೆ.
ಕೀಲಾರುಗೋಪಾಲಕೃಷ್ಣಯ್ಯರವರು ದಾನವಾಗಿ ನೀಡಿದ ಜಾಗದಲ್ಲಿ ಮಸೀದಿಗೆ 2002 ಬೆಂಕಿ ಅನಾಹುತ್ತಕ್ಕೆ ತುತ್ತಾಗಿ ಹೊಸ ಮಸೀದಿ ಮದ್ರಸಾ ಪುನರ್ನಿರ್ಮಾಣ ವಾಗುವಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯಾಗಲೀ ಯಾವುದೇ ಇಲಾಖೆಯಾಗಲೀ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ಅಲ್ಲದೇ ಹಿಂದುಜಾಗರಣ ವೇದಿಕೆಯು
ಉಲ್ಲೇಖಿಸಿದ ಸ. ನಂಬರ್ 89/1 ಮತ್ತು 89/2 ಭೂಮಿಯು 1904ರಿಂದಲೂ ಪಟ್ಟಾ ಭೂಮಿಯಾಗಿ ದಾಖಲೆಗಳಲ್ಲಿ ಕಂಡು ಬರುತ್ತದೆ.
ನಾವು ಕಾನೂನು ರೀತಿಯಲ್ಲಿ ದಪನ ಭೂಮಿಯನ್ನು ಪಡೆದಿದ್ದರೂ
ಕೆಲವು ಖಾಸಗೀ ವ್ಯಕ್ತಿಗಳ ದೂರಿನಂತೆ ಸದ್ರಿ ಸ್ಥಳದ ಬಗ್ಗೆ ಭೂ ಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣ ತನಿಖೆಯಲ್ಲಿದೆ
ಮತ್ತು ಎಲ್ಲಾ ಪ್ರಕರಣಗಳಿಗೆ ತಡೆಯಾಜ್ಞೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಕಾಗಿದ್ದು ಪ್ರಕರಣ ನಡಯುತ್ತಾಇದೆ.ಅಲ್ಲದೆ ಅರಣ್ಯೇತರ ಚಟುವಟಿಕೆ ತಿದ್ದುಪ್ಪಡಿ ಕಾಯಿದೆ ಅಡಿಯಲ್ಲಿ (f c)ಆಗಾಗಲೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲಾಗಿದ್ದು ಮಂಜೂರಾತಿ ಹಂತದಲ್ಲಿದೆ.
ತಾಲೂಕಿನಾದ್ಯಂತ ಅದೆಷ್ಟೆ ಮಂದಿರ ಮಸೀದಿ ಚರ್ಚುಗಳು ಮತ್ತು ಸರಕಾರಿ ಕಟ್ಟಡಗಳು ಮೀಸಲು ಅರಣ್ಯ ಪ್ರದೇಶದಲ್ಲಿ ಇದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳ ಮದ್ಯೆ ಇಡೀ ರಾಜ್ಯದಲ್ಲಿ ಸಂಘರ್ಷ ನಡೆಯುತ್ತಾ ಇದೆ.
ಆದ್ದರಿಂದ ಸುಳ್ಯ ತಾಲೂಕಿನಾದ್ಯಂತವಿರುವ ಸರ್ವ ಧರ್ಮಗಳ ಧಾರ್ಮಿಕ ಕೇಂದ್ರಗಳಿಗೆ ದಕ್ಕೆಯಾಗದಂತೆ ಪರಿಹಾರ ಕಂಡು ಕೊಳ್ಳಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಕಾರ್ಯದರ್ಶಿ ಉಮ್ಮರ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಿನಲ್ಲಿ ಮಸೀದಿ ಜಾಗ ಅರಣ್ಯ ಇಲಾಖೆಯದು ಎನ್ನುವ ಚರ್ಚೆಗೆ ಗ್ರಾಸವಾದ ಘಟನೆ ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ತಲುಪುತ್ತದೆ ಎನ್ನುವುದು ಕಾದುನೋಡಬೇಕಾಗಿದೆ.





