July 6, 2026

ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ರಂಗಪ್ರಶಸ್ತಿಗೆ ತುಳು ರಂಗಭೂಮಿಯ ಕಲಾವಿದೆ ಸರೋಜಿನಿ ಶೆಟ್ಟಿಗೆ ಆಯ್ಕೆ

0
image_editor_output_image2054376751-1646979819634.jpg

ಮಂಗಳೂರು: ತುಳು ರಂಗಭೂಮಿಯ ಖ್ಯಾತ ಕಲಾವಿದೆ ಶಕ್ತಿನಗರದ ಸರೋಜಿನಿ ಶೆಟ್ಟಿ ಅವರು 2021ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ರಂಗಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸರೋಜಿನಿ ಅವರು ಶ್ರೀ ಗಣೇಶ ನಾಟಕ ಸಭಾ, ಚಾ ಪರ್ಕ ಕಲಾವಿದರು ಮತ್ತು ಶ್ರೀ ಲಲಿತಾ ಕಲಾವಿದರು ಮಂಗಳೂರು ಸೇರಿದಂತೆ ವಿವಿಧ ನಾಟಕ ತಂಡಗಳಲ್ಲಿ ನಟಿಸಿದ್ದಾರೆ.

ವೀರರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ಕಟೀಲುದಪ್ಪೆ ಉಳ್ಳಾಲ್ದಿ, ಬಂಗಾರ್ ಬಾಳೆ, ಬಯ್ಯಮಲ್ಲಿಗೆ ಮುಂತಾದ ಸುಮಾರು 2,500 ನಾಟಕಗಳಲ್ಲಿ ನಟಿಸಿದ್ದಾರೆ.

ತುಳುನಾಡ ಸಿರಿ, ಬಂಗಾರ್ ಪಟ್ಲೇರ್, ಸಂಗಮ ಹೀಗೆ 14ಕ್ಕೂ ಹೆಚ್ಚು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕ್ಷಿ, ಬೊಲ್ಲಿದೋಟ ಮತ್ತು ದಾರೆದ ಸೀರೆ. ಬರೌಡ ಬಂದಸಾಲೆ ಮತ್ತು ಇರುಳು ಮುಂತಾದ ಟಿವಿ ಧಾರಾವಾಹಿಗಳಲ್ಲಿ ನಟಿಸಿದ ಅವರು ಕಿರುತೆರೆಯಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!