February 3, 2026

ಡ್ಯಾನ್ಸ್‌-ಮೂಡ್ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ: 64 ಮಹಿಳೆಯರ ರಕ್ಷಣೆ, 9 ಮಂದಿಯ‌ ಬಂಧನ

0
image_editor_output_image-644503684-1646980210023.jpg

ಬೆಂಗಳೂರು: ಅಕ್ರಮವಾಗಿ ಡ್ಯಾನ್ಸ್‌ಬಾರ್‌ ನಡೆಸುತ್ತಿದಲ್ಲದೆ, ಮಹಿಳೆಯರಿಗೆ ಲೈಂಗಿಕ ಪ್ರಚೋದಿತ ಉಡುಪುಗಳನ್ನು ಹಾಕಿಸಿ ನೃತ್ಯ ಮಾಡಿಸುತ್ತಿದ್ದ ಗಾಂಧಿನಗರದ 5ನೇ ಮುಖ್ಯ ರಸ್ತೆಯ ಮೂಡ್‌ ಬಾರ್‌ ಮತ್ತು ರೆಸ್ಟೋರೆಂಟ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಮೂವರು ಕೆಲಸಗಾರರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಇದೇ ವೇಳೆ 64 ಮಂದಿ ಮಹಿಳೆಯರನ್ನು ರಕ್ಷಿಸಿ, 1.32 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಉಪ್ಪಾರಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರುವ ಮೂಡ್‌ ಬಾರ್‌ ಮತ್ತು ರೆಸ್ಟೋರೆಂಟ್‌ ಮಾಲಿಕರು, ವ್ಯವಸ್ಥಾಪಕರು ಅಕ್ರಮವಾಗಿ ಡ್ಯಾನ್ಸ್‌ ಬಾರ್‌ ನಡೆಸುತ್ತಿದ್ದರು. ಅಲ್ಲದೆ, ಮಹಿಳಾ ಕೆಲಸಗಾರರಿಗೆ ಲೈಂಗಿಕವಾಗಿ ಪ್ರಚೋದಿಸುವಂತ ತುಂಡು ಉಡುಪು ಧರಿಸಿ ಡ್ಯಾನ್ಸ್‌ ಮಾಡಿಸುತ್ತಿದ್ದರು.

ಗ್ರಾಹ ಕರು ಡ್ಯಾನ್ಸ್‌ ಮಾಡುವ ಮಹಿಳೆಯರ ಮೇಲೆ ಹಣ ಎಸೆಯುವಂತೆ ಪ್ರಚೋದಿಸಿ ಹಣ ಗಳಿಸುತ್ತಿ ದ್ದರು. ಪರವಾನಗಿ ಪಡೆಯದೇ ಡ್ಯಾನ್ಸ್‌ ಬಾರ್‌ ನಡೆಸುತ್ತಿರು ವುದು ಹಾಗೂ ನಿಯಮ ಉಲ್ಲಂಘಿಸಿ ಡಿ.ಜೆ. ಮ್ಯೂಸಿಕ್‌ ಬಳಸಿ ಡ್ಯಾನ್ಸ್‌ಬಾರ್‌ ನಡೆಸುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಡ್ಯಾನ್ಸ್‌ಬಾರ್‌ನಲ್ಲಿದ್ದ 74 ಗ್ರಾಹಕರು ಹಾಗೂ ಮಹಾರಾಷ್ಟ್ರದ-8, ದೆಹಲಿ-6, ಪಂಜಾಬ್‌-8, ರಾಜಸ್ಥಾನ-13, ಮಧ್ಯಪ್ರದೇಶ-3, ಉತ್ತರಾ ಖಂಡ-2, ಉತ್ತರಪ್ರದೇಶ-5,ಪಶ್ಚಿಮ ಬಂಗಾಳ-2 ಹಾಗೂ ಕರ್ನಾಟಕದ 17 ಮಂದಿ ಸೇರಿ 64 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!