ಎಬಿವಿಪಿ ಗೂಂಡಾಗಳು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಲಿಪಶು ಮಾಡುತ್ತಿದ್ದಾರೆ: ಸಿಎಫ್‌ಐ ಆರೋಪ
ಮಂಗಳೂರು: ನಗರದ ದಯಾನಂದ ಪೈ ಹಾಗೂ ಸತೀಶ್ ಪೈ ಸರಕಾರಿ ಕಾಲೇಜಿನಲ್ಲಿ ನಡೆದ ಹಿಜಾಬ್ ಗಲಾಟೆಯಲ್ಲಿ ಬಿಜೆಪಿ ಪ್ರೇರಿತ ಎಬಿವಿಪಿ ಗೂಂಡಾಗಳು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಸಿಎಫ್‌ಐ ನಾಯಕಿ ಆಯಿಷಾ ಮುರ್ಷಿದಾ ಆರೋಪಿಸಿದ್ದಾರೆ.
ಈ ಬಗ್ಗೆ ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಯಾನಂದ ಪೈ ಕಾಲೇಜಿನಲ್ಲಿ ಘಟನೆ ಬಗ್ಗೆ ಸಂತ್ರಸ್ತೆ ವಿದ್ಯಾರ್ಥಿನಿ ಕಿರುಕುಳ ದೂರು ನೀಡಿದ್ದಾರೆ.
ಆದರೆ ಪೊಲೀಸರು ಅದರಡಿ ಕೇಸು ದಾಖಲಿಸಿಲ್ಲ. ಅಲ್ಲದೆ ಸಂತ್ರಸ್ತೆ ವಿದ್ಯಾರ್ಥಿನಿಯ ಮೇಲೂ ಸ್ಥಳದಲ್ಲಿ ಇರದ ಎಬಿವಿಪಿಯ ವಿದ್ಯಾರ್ಥಿನಿ ದೂರು ದಾಖಲಿಸುತ್ತಾಳೆ. ಇದು ಕಾನೂನಿನ ದುರ್ಬಳಕೆ. ಸಂತ್ರಸ್ತೆ ವಿದ್ಯಾರ್ಥಿನಿ ಘಟನೆ ನಡೆದ ದಿನವೇ ಕೇಸು ದಾಖಲಿಸಿದ್ದಾಳೆ.
ಆದರೆ ಸಾಯಿ ಸಂದೇಶ್ ಮತ್ತು ಸಂಗಡಿಗರು ಯಾಕೆ ಎರಡು ದಿನ ತಡವಾಗಿ ದೂರು ದಾಖಲಿಸಿದ್ದಾರೆ ಎಂದು ಪ್ರಶ್ನಿಸಿದರು. ಇದು ಎಬಿವಿಪಿಯ ಪಿತೂರಿ ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಫಾತಿಮಾ ಉಸ್ಮಾನ್, ಆಯೆಷಾ ತಸ್ಲಮ್ ಮತ್ತಿತರರು ಇದ್ದರು.




