February 2, 2026

ಉಕ್ರೇನ್ ನಿಂದ ಮಂಗಳೂರು ತಲುಪಿದ ವಿದ್ಯಾರ್ಥಿಗಳು

0
IMG_20220307_164007.jpg

ಮಂಗಳೂರು: ಯುದ್ಧಗ್ರಸ್ತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣಕನ್ನಡ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಇಂದು ಸುರಕ್ಷಿತವಾಗಿ ಮಂಗಳೂರು ತಲುಪಿದ್ದಾರೆ.

ಮಂಗಳೂರಿನ ಕ್ಲೇಟನ್ ಓಸ್ಮಂಡ್ ಡಿಸೋಜ, ಅನೈನ ಅನಾ, ಅಹ್ಮದ್ ಸಾದ್ ಅರ್ಶದ್ ಹಾಗೂ ಮೂಡುಬಿದಿರೆಯ ಶಾಲ್ವಿನ್ ಪ್ರೀತಿ ಅರಾನ್ಹ ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಇದೀಗ ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದ್ದಾರೆ. ತಮ್ಮ ಮಕ್ಕಳು ಸುರಕ್ಷಿತವಾಗಿ ತಲುಪಿದ್ದಕ್ಕೆ ಹೆತ್ತವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇವರೆಲ್ಲರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!