February 2, 2026

ಮಂಗಳೂರು ರಥಬೀದಿ ಕಾಲೇಜಿನಲ್ಲಿ ಹಿಜಾಬ್‌ ವಿವಾದ: 15 ಮಂದಿ ವಿರುದ್ಧ ಎಫ್‌ಐಆರ್‌

0
IMG_20220307_150738.jpg

ಮಂಗಳೂರು: ನಗರದ ರಥಬೀದಿಯ ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಘಟನೆಗೆ ಸಂಬಂಧಿಸಿ 15 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಮುಖ ಆರೋಪಿ ಸಾಯಿ ಸಂದೇಶ್ ಹಾಗೂ ಇತರರ ಮೇಲೆ ಬಂದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಯಾನಂದ ಪೈ- ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ನಿತೇಶ್ ಶೆಟ್ಟಿ(20), ಸಮಂತ್ ಆಳ್ವ(21), ಸನತ್‌ ಶೆಟ್ಟಿ(20), ಸಾಯಿ ಸಂದೇಶ್ (20) ಹಾಗೂ ಇತರ 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಇದೆ.

ಘಟನೆ ಕುರಿತು ಮಾ.4 ರ ರಾತ್ರಿ ಹಲ್ಲೆಗೊಳಗಾದ ವಿದ್ಯಾರ್ಥಿನಿ ಹಿಬಾ ಶೇಖ್ ಬಂದರು ಠಾಣೆಗೆ ದೂರು ನೀಡಿದ್ದರು.

8 ಜನರ ಮೇಲೆ ಎಫ್‌ಐಆರ್‌: ಪೊಲೀಸರ ಮಾಹಿತಿ

ಘಟನೆ ಬಗ್ಗೆ ಬಂದರು ಪೊಲೀಸರಿಂದ ಮಾಹಿತಿ ಪಡೆದಾಗ ಎರಡು ಗುಂಪುಗಳ ಒಟ್ಟು 8 ಜನರ ಮೇಲೆ ಎಫ್‌ಐಆರ್‌ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!