November 23, 2026

ಬೆಳ್ತಂಗಡಿ: 21 ವರ್ಷದ ಯುವತಿ ನಾಪತ್ತೆ, ದೂರು ದಾಖಲು

0
image_editor_output_image-573940061-1635398158961.jpg

ಬೆಳ್ತಂಗಡಿ: 21 ವರ್ಷದ ಯುವತಿಯೊಬ್ಬಳು ಕಾಣೆಯಾಗಿರುವ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಣೆಯಾದ ಯುವತಿಯನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ರಾಮ ಎಂಬುವವರ ಪುತ್ರಿ ರೇಣುಕಾ ಎಂದು ಗುರುತಿಸಲಾಗಿದೆ.

ರೇಣುಕಾ ಒಂದು ವರ್ಷದಿಂದ ನಗರದ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ನೋಡಿಕೊಳ್ಳಲು ಕಳೆದ ಮೂರು ತಿಂಗಳಿಂದ ಮನೆಯಲ್ಲೇ ಇದ್ದಳು.

ಇನ್ನು ಅಕ್ಟೋಬರ್ 25 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಪತ್ತೆಯಾಗಿದ್ದಳು. ಆಕೆ ಮೊಬೈಲ್‌ಗೆ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!