ಕಾರು ಅಪಘಾತ: ಕಾಚಾ ಬಾದಮ್ ಗಾಯಕ ಭುವನ್ ಬಡ್ಯಾಕರ್ ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ಇತ್ತೀಚೆಗೆ ವೈರಲ್ ಆದ ಕಚಾ ಬಾದಮ್ ಹಾಡಿನ ಗಾಯಕ ಭುವನ್ ಬಡ್ಯಾಕರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭುವನ್ ಅವರು ಇತ್ತೀಚೆಗೆ ಖರೀದಿಸಿದ ತಮ್ಮ ಸೆಕೆಂಡ್ ಹ್ಯಾಂಡ್ ಕಾರನ್ನು ಹೇಗೆ ಓಡಿಸಬೇಕೆಂದು ಕಲಿಯುತ್ತಿದ್ದಾಗ ಈ ಘಟನೆ ನಡೆದಿದೆ. ಎದೆನೋವು ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭುವನ್ ಬಡ್ಯಾಕರ್ ಅವರ ಕಚಾ ಬದಮ್ ಹಾಡು ವೈರಲ್ ಆದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದರು. ಪಶ್ಚಿಮ ಬಂಬಾಳದ ಬೀರ್ಭುಮ್ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಕಡಲೆಕಾಯಿ ಮಾರಾಟ ಮಾಡುವ ಮೂಲಕ ಖರೀದಿದಾರರನ್ನು ಆಕರ್ಷಿಸಲು ಬಡ್ಯಾಕರ್ ಕಚಾ ಬಾದಮ್ ಹಾಡನ್ನು ರಚಿಸಿದ್ದರು. ಅವರ ಹಾಡನ್ನು ನಂತರ ರೀಮಿಕ್ಸ್ ಮಾಡಿ, ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದು 50 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.