ಹೊಗೈಬಜಾರ್: ನಾಪತ್ತೆಯಾಗಿದ್ದ ಬಾಲಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

ಮಂಗಳೂರು: ರವಿವಾರದಂದು ನಾಪತ್ತೆಯಾಗಿದ್ದ ಖಾಸಗಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನ ಶವ ಸೋಮವಾರ ಇಲ್ಲಿನ ಹೊಗೈಬಜಾರ್ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಮೃತ ಬಾಲಕನನ್ನು ದೃಶ್ಯಾಂತ್ (16) ಎಂದು ಗುರುತಿಸಲಾಗಿದೆ. ಇಲ್ಲಿನ ಮಹಾಕಾಳಿ ಪಡ್ಪು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ದೃಶ್ಯಾಂತ್ ಹೋಗಿ ಭಾನುವಾರ ಮಧ್ಯಾಹ್ನ 3.30ರವರೆಗೆ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನಿರ್ವಹಿಸುತ್ತಿದ್ದ.
ಪಂದ್ಯ ಮುಗಿಯುತ್ತಿದ್ದಂತೆ ಆತನ ಸ್ನೇಹಿತರು ಪಂದ್ಯ ಮುಗಿಸಿ ತೆರಳಿದ್ದರು. ಆದರೆ ದೃಶ್ಯಾಂತ್ ಮಾತ್ರ ಮನೆ ತಲುಪಿಲ್ಲರಲಿಲ್ಲ. ಆತನ ಸ್ನೇಹಿತರು, ಸಂಬಂಧಿಕರು ಮತ್ತು ಇತರ ಪರಿಚಿತ ವ್ಯಕ್ತಿಗಳೊಂದಿಗೆ ಆತನ ಬಗ್ಗೆ ವಿಚಾರಿಸಲಾಯಿತಾದರೂ ಮಾಹಿತಿ ಲಭ್ಯವಾಗಿರಲಿಲ್ಲ.