ಅಲೋಪತಿ ವಿರುದ್ಧ ತಪ್ಪು ಮಾಹಿತಿ:
ಬಾಬಾ ರಾಮ್‌ದೇವ್‌ಗೆ ಸಮನ್ಸ್ ಜಾರಿ
ದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಅಲೋಪತಿ ವಿರುದ್ಧ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಭಾರತೀಯ ವೈದ್ಯಕೀಯ ಸಂಘ ಮತ್ತು ಇತರ ವೈದ್ಯರ ಸಂಘಗಳ ಮೊಕದ್ದಮೆಯ ಮೇಲೆ ದೆಹಲಿ ಹೈಕೋರ್ಟ್ ಬುಧವಾರ ಬಾಬಾ ರಾಮ್‌ದೇವ್‌ಗೆ ಸಮನ್ಸ್ ಜಾರಿ ಮಾಡಿದೆ.
ಸಂಘದ ಈ ಮನವಿಯೂ ಕ್ಷುಲ್ಲಕವಲ್ಲ, ಇದು ಖಂಡಿತವಾಗಿಯೂ ಪ್ರಕರಣ ದಾಖಲಿಸುವಂತ ವಿಷಯ ಎಂದು ಎಂದು ಹೇಳಿದ ನ್ಯಾಯಮೂರ್ತಿ ಸಿ ಹರಿ ಶಂಕರ್, ಮೊಕದ್ದಮೆಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ರಾಮ್‌ದೇವ್‌ಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿಯಲ್ಲಿ ನಿಗದಿಪಡಿಸಲಾಗಿದೆ.
ನಾನು ರಾಮದೇವ್ ವಿಡಿಯೋ ತುಣುಕುಗಳನ್ನು ನೋಡಿದ್ದೇನೆ. ವೀಡಿಯೊ ಕ್ಲಿಪ್ ಗಳ ಪರಿಶೀಲನೆಯಿಂದ, ನಿಮ್ಮ ಕ್ಲೈಂಟ್ ಅಲೋಪತಿ ಚಿಕಿತ್ಸಾ ಪ್ರೋಟೋಕಾಲ್ ಅನ್ನು ತಿರಸ್ಕರಿಸುತ್ತಿದ್ದಾರೆ. ಅವರಿಗೆ ತಡೆಯಾಜ್ಞೆ ನೀಡಲು ಏನೂ ಇಲ್ಲದಿರಬಹುದು. ಆದರೆ ಪ್ರಕರಣವು ಕ್ಷುಲ್ಲಕವಲ್ಲ ಎಂದು ನ್ಯಾಯಾಧೀಶರು ರಾಮ್ ದೇವ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ನಾಯರ್ ಅವರಿಗೆ ತಿಳಿಸಿದರು.